

ಲಖನೌ: ಮಾಹಾಮಾರಿ ಕರೊನಾ ವೈರಸ್ ನಿರ್ವಹಣೆ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶಂಸಿಸಿರುವ ಆಸ್ಟ್ರೇಲಿಯನ್ ಸಂಸದ ಕ್ರೇಗ್ ಕೆಲ್ಲಿ, ತಮ್ಮ ದೇಶದಲ್ಲಿನ ಕೋವಿಡ್ ನಿರ್ವಹಣೆಗಾಗಿ ಯೋಗಿ ಅವರ ನೆರವು ಕೋರಿದ್ದಾರೆ.
ಟ್ವೀಟ್ ಮಾಡಿರುವ ಕೆಲ್ಲಿ, ಭಾರತದ ಉತ್ತರ ಪ್ರದೇಶವು ಮತ್ತು ಅದರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಮರ್ಥ ಆಡಳಿತದೊಂದಿಗೆ ಕೋವಿಡ್ ಸಾಂಕ್ರಮಿಕವನ್ನು ಸಮರ್ಥವಾಗಿ ಎದುರಿಸಿದೆ. ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಸೋಂಕಿತ ಜನರ ಸುರಕ್ಷಿತಾ ಕ್ರಮವಾಗಿ ಉತ್ತರ ಪ್ರದೇಶವು ‘ಐವರ್ಮೆಕ್ಟಿನ್’ ಅನ್ನು ಪರಿಚಯಿಸಿರುವುದು ಅದ್ಭುತ ಎಂದು ಕೆಲ್ಲಿ ಕೊಂಡಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ನಮ್ಮ ದೇಶದಲ್ಲಿ ಸೃಷ್ಟಿಯಾಗಿರುವ ಕೋವಿಡ್ ಬಿಕ್ಕಟ್ಟು ನಿಭಾಯಿಸಲು ಯೋಗಿ ಆದಿತ್ಯನಾಥ್ ಅವರನ್ನು ನೆರವು ಕೇಳಿದ್ದಾರೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಮ ಯೋಗಿ ಆದಿತ್ಯನಾಥ್ ಅವರನ್ನು ಕೊಂಡಿದ್ದರು. ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಮತ್ತು ಕಾನೂನು ನೆರವು ಇತರ ಸೇವೆಗಳನ್ನು ವಿಸ್ತರಿಸಲು ಸಹಾಯವಾಣಿ ಸೌಲಭ್ಯವನ್ನು ನೀಡಲು ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)