More

    ಅರವಿಂದ್​ಗೆ ಟ್ರೋಫಿ ಗೆಲ್ಲುವ ಅವಕಾಶ ಕಸಿದ ಎರಡನೇ ಇನ್ನಿಂಗ್ಸ್​: ಇಲ್ಲಿದೆ ಅಚ್ಚರಿಯ ಮಾಹಿತಿ!

    ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದಾಗಿ ಬಿಗ್​ಬಾಸ್​ 8ನೇ ಆವೃತ್ತಿಯು 75 ದಿನಗಳಿಗೆ ಮೊಟಕುಗೊಂಡಿತ್ತು. ಮತ್ತೆ ಶೋ ಮರು ಪ್ರಸಾರ ಆಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿತ್ತು. ಇದರ ನಡುವೆಯೇ ಎರಡನೇ ಇನ್ನಿಂಗ್ಸ್​ ಶುರುವಾಗಲಿದೆ ಎಂಬ ಮಾತು ಬಿಗ್​ಬಾಸ್​ ಅಭಿಮಾನಿಗಳಿಗೆ ಖುಷಿ ನೀಡಿತು. ಅದರಂತೆಯೇ ಬುಧವಾರ (ಜೂನ್ 23) ಸಂಜೆಯಿಂದಲೇ ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಆರಂಭವಾಗಿದ್ದು, ಸ್ಪರ್ಧಿಗಳು ಮತ್ತೊಮ್ಮೆ ಮನೆ ಸೇರಿಕೊಂಡಿದ್ದಾರೆ.

    ಇದರ ನಡುವೆ ಬಿಗ್​ಬಾಸ್​ ಸ್ಪರ್ಧಿಗಳಲ್ಲಿ ಒಬ್ಬರಾದ ಕೆ.ಪಿ. ಅರವಿಂದ್​ ಈ ಆವೃತ್ತಿಯ ವಿನ್ನರ್​ ಆಗಲು ಸಾಧ್ಯವೇ ಇಲ್ಲ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.

    ಯಾವುದೇ ಅಡ್ಡಿಯಿಲ್ಲದೆ ಶೋ ನಡೆದಿದ್ದರೆ ಬಹುಶಃ ಅರವಿಂದ್​ಗೆ ಶೋ ಗೆಲುವ ಅವಕಾಶ ಇತ್ತು. ಆದರೆ, ಇದೀಗ ಲಾಕ್​ಡೌನ್​ ಬ್ರೇಕ್​ನಿಂದಾಗಿ ಸ್ಪರ್ಧಿಗಳು ತಮ್ಮ ಕಾರ್ಯಗಳು ಮತ್ತು ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡಲು ಸಾಕಷ್ಟು ಸಮಯವನ್ನು ಪಡೆದಿದ್ದು, ತಮ್ಮ ಆಟದ ಶೈಲಿಯನ್ನು ಬದಲಾಯಿಸುವ ಸಾಧ್ಯತೆ ಇದೆ.

    ಟ್ರೋಫಿ ಗೆಲ್ಲಲು ಎಲ್ಲರಿಗೂ ಎರಡನೇ ಅವಕಾಶ ದೊರಕಿರುವುದರಿಂದ ಎಲ್ಲರ ಗೇಮ್​ ಪ್ಲಾನ್​ ಕೂಡ ಬದಲಾಗಿರುತ್ತದೆ. ಹೀಗಾಗಿ ಎರಡನೇ ಇನ್ನಿಂಗ್ಸ್​ನಲ್ಲಿ ಸ್ಪರ್ಧಿಗಳ ನಡವೆ ಒಳ್ಳೆಯ ಪೈಪೋಟಿ ಏರ್ಪಡುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಅರವಿಂದ್​ಗೆ ಗೆಲುವು ಸ್ವಲ್ಪ ಕಷ್ಟವಾಗಲಿದೆ.

    ಈ ಹಿಂದೆ ಅರವಿಂದ್​ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್​ ಜೋಡಿ ಬಿಗ್​ ಮನೆಯಲ್ಲಿ ಕಮಾಲ್​ ಮಾಡಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ ಅರವಿಂದ್​ ಯಾವ ಗೇಮ್​ ಪ್ಲಾನ್​ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

    ಬಿಗ್​ಬಾಸ್​ ಮನೆ ಒಳಗೆ ಬರ್ತಿದ್ದಂತೆ ಫೈಟ್ ಶುರು ಮಾಡಿದ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್!

    ನಾಮಿನೇಶನ್ ಬೆಂಕಿ: ಸುದೀಪ್ ಕಿವಿ ಮಾತಲ್ಲೂ ಮಹಾ ಪಂಚ್! ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಬಿಗ್‌ಬಾಸ್ ಆಟವೇ ಬೇರೆ!

    ದಿವ್ಯಾ ಉರುಡುಗರ ಕೊನೆಯ ಪ್ರೋಮೋ ನೋಡಿ ಕಲರ್ಸ್​ ಕನ್ನಡ​ ವಿರುದ್ಧ ತಿರುಗಿಬಿದ್ದ ವೈಷ್ಣವಿ ಫ್ಯಾನ್ಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts