ನಾನು ವಾಟ್ಸ್​ಆ್ಯಪ್​ನಲ್ಲೇ ಹೇಳಿದ್ದೆ...ಅನಂತರಾಜು ಸಾವಿನ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಆಡಿಯೋ ಲೀಕ್​!

1283813
Published on

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಸಂಗತಿಗಳ ಬೆಳಕಿಗೆ ಬರುತ್ತಿದೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವೆ ನಡೆದಿರುವ ಮಾತುಕತೆಯ ಒಂದೊಂದೆ ಆಡಿಯೋ ಹೊರಬರುತ್ತಿದೆ. ಇದೀಗ ಮತ್ತೊಂದು ಆಡಿಯೋ ಸೋರಿಕೆಯಾಗಿದ್ದು, ಅದರಲ್ಲಿ ಗರ್ಭಪಾತದ ಬಗ್ಗೆ ಇಬ್ಬರು ಮಾತನಾಡಿರುವುದು ಬೆಳಕಿಗೆ ಬಂದಿದೆ.

ಇದುವರೆಗೂ ಸೋರಿಕೆಯಾದ ನಾಲ್ಕು ಆಡಿಯೋದಲ್ಲಿ ಸುಮಾ ಮತ್ತು ರೇಖಾ ಪರಸ್ಪರ ಮಾತಿನಲ್ಲೇ ಕಿತ್ತಾಡಿಕೊಳ್ಳುತ್ತಿದ್ದರು. ಆದರೆ, ಇದೀಗ ಸೋರಿಕೆಯಾಗಿರುವ ಆಡಿಯೋದಲ್ಲಿ ಇಬ್ಬರು ಶಾಂತವಾಗಿಯೇ ಮಾತನಾಡಿದ್ದಾರೆ. ರೇಖಾಳ ಗರ್ಭಪಾತದ ಬಗ್ಗೆ ಇಬ್ಬರು ಮಾತನಾಡಿಕೊಂಡಿದ್ದಾರೆ.

ನಿನ್ನ ಮಗುವಿಗೆ ತಾಯಿಯಾಗಿದ್ದೀನಿ ಎಂಬ ವಿಚಾರವನ್ನು ನೀನು ಅನಂತುಗೆ ಹೇಳಿದ್ಯಾ? ಇಲ್ವಾ? ಎಂದು ಸುಮಾ ಪ್ರಶ್ನೆ ಮಾಡಿದ್ದು, ಇದಕ್ಕೆ ಉತ್ತರ ನೀಡಿರುವ ರೇಖಾ, ಹೇಳಿದ್ದೆ ಸುಮಾ, ಧರ್ಮಸ್ಥಳದ ಮಂಜುನಾಥನ ಆಣೆಗೂ ನಾನು ಹೇಳಿದ್ದೆ. ಗರ್ಭಿಣಿಯಾಗಿದ್ದೇನೆ ಎಂದು ವಾಟ್ಸ್​ಆ್ಯಪ್​ ಚಾಟ್​ ಮೂಲಕ ಹೇಳಿದ್ದೆ. ನಾನು ಕಳುಹಿಸಿದ್ದ ವಾಟ್ಸ್​ಆ್ಯಪ್​ ಮೆಸೇಜ್​ ಚಾಟ್​ ಹಿಸ್ಟರಿಯಲ್ಲಿ ಇರಬಹುದು ಎಂದು ರೇಖಾ ಹೇಳಿದ್ದಾರೆ.

ಗರ್ಭಿಣಿ ಅಂತಾ ಹೇಳಿದ್ದಕ್ಕೆ ಅನಂತು ಏನು ಹೇಳಿದ ಎಂದು ಸುಮಾ ಮರುಪ್ರಶ್ನೆ ಮಾಡಿದಾಗ, ಅದಕ್ಕೆ ಉತ್ತರಿಸಿದ ರೇಖಾ, ಗರ್ಭಪಾತ ಮಾಡಿಸಿಕೊಳ್ಳಲು ಹೇಳಿದರು. ಗರ್ಭಪಾತ ಆದಾಗಲೂ ನನಗೆ ಫೋನ್​ ಮಾಡಿ ಗರ್ಭಪಾತ ಆಯ್ತಾ ಅಂತಾ ಕೇಳಿದರು ಮತ್ತು ವಿಶ್ರಾಂತಿ ಪಡೆಯಲು ತಿಳಿಸಿದರು. ಎರಡು ಬಾರಿ ಗರ್ಭಪಾತ ಆಗಿದೆ. ಎರಡೂ ಬಾರಿ ಗರ್ಭಪಾತ ಮಾಡಿಸಿರುವುದು ಅವರಿಗೆ ತಿಳಿದಿತ್ತು ಎಂದು ರೇಖಾ ಮಾತನಾಡಿದ್ದಾರೆ.

ನಮಗು ಒಂದು ಮಗು ಇರಲಿ ನಮ್ಮಿಬ್ಬರ ಸಂಬಂಧ ಇನ್ನೂ ಗಟ್ಟಿಯಾಗಿರುತ್ತದೆ ಎಂದು ನೀವಿಬ್ಬರು ಮಾತನಾಡಿದ್ದಾಗಿ ಅನಂತರಾಜು ಹೇಳಿದನಲ್ಲ ಎಂದು ಸುಮಾ ಮತ್ತೊಂದು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರೇಖಾ, ಖಂಡಿತವಾಗಿಯೂ ನಾನು ಆ ರೀತಿ ಹೇಳಿರಲಿಲ್ಲ. ನಾನು ಗರ್ಭಿಣಿ ಅಂತಾ ಹೇಳಿದ್ದಕ್ಕೆ ಅವರು ಹೇಳಿದ್ದು ಒಂದೇ ಮಾತು, ನಿನಗೆ ಎರಡು ಹೆಣ್ಣು ಮಕ್ಕಳಿದ್ದಾರೆ ಮತ್ತು ನನಗೆ ಮೂರು ಮಕ್ಕಳಿದ್ದಾರೆ. ಈ ಮಕ್ಕಳನ್ನೇ ಸಾಕುವುದು ತುಂಬಾ ಕಷ್ಟ. ಹೀಗಿರುವಾಗ ಇನ್ನೊಂದು ಮಗು ಏನಕ್ಕೆ? ನಾಳೆ ನಿನ್ನ ಗಂಡ ವಿನೋದ್​ಗೆ ಗೊತ್ತಾದರೆ ತೊಂದರೆ ಆಗುತ್ತದೆ. ನನ್ನನ್ನು ನಂಬೋದಾದ್ರೆ ಮಗು ತೆಗೆಸು ಎಂದು ಹೇಳಿದರು ಎಂದು ರೇಖಾ, ಸುಮಾಗೆ ಉತ್ತರ ನೀಡಿದ್ದಾರೆ.

ನಿನಗೆ ಆಸೆ ಇತ್ತಂತೆ ಎಂದು ಸುಮಾ ಕೇಳಿದಾಗ ಹೌದು, ನನಗೆ ಗಂಡು ಮಗು ಇಟ್ಟುಕೊಳ್ಳಬೇಕೆಂಬ ಆಸೆ ಇತ್ತು ಎಂದು ಆಡಿಯೋ ಕೊನೆಯಲ್ಲಿ ರೇಖಾ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net