

ಚೆನ್ನೈ: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ ಪಡ್ಡೆ ಹುಡುಗರ ಫೇವರಿಟ್ ಎಂಬುದರಲ್ಲಿ ಸಂಶಯವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ.
ಜಯಂ ರವಿ ಅಭಿನಯಯದ ಕೋಮಲಿ ಸಿನಿಮಾ ಮೂಲಕ ಕಾಲಿವುಡ್ಗೆ ಪದಾರ್ಪಣೆ ಮಾಡಿದ ಸಂಯುಕ್ತಾ, ಪಪ್ಪಿ, ಥೇಲ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ಮನ್ಮಥ ಲೀಲೆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾನಾಡು ಖ್ಯಾತಿಯ ವೆಂಕಟ್ ಪ್ರಭು ನಿರ್ದೇಶನದ ಮನ್ಮಥ ಲೀಲೆ ಚಿತ್ರದಲ್ಲಿ ತಮ್ಮ ಬೋಲ್ಡ್ ಪಾತ್ರದ ಮೂಲಕವೇ ಸಂಯುಕ್ತಾ ಕಾಲಿವುಡ್ನಲ್ಲಿ ಭಾರೀ ಸದ್ದು ಮಾಡಿದ್ದಾರೆ. ಇನ್ನಷ್ಟು ಚಿತ್ರಗಳು ಅವರ ಕೈಯಲ್ಲಿವೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸಂಯುಕ್ತಾ ಆಗಾಗಾ ಹಾಟ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಸದ್ಯ ಸಂಯುಕ್ತಾ ದುಬೈ ಪ್ರವಾಸದಲ್ಲಿದ್ದಾರೆ. ನೀಲಿ ಬಣ್ಣದ ಮೈಕ್ರೋ ಬಿಕಿನಿ ಉಡುಗೆಯಲ್ಲಿ ಸ್ವಿಮ್ಮಿಂಗ್ ಪೂಲ್ ಒಂದರ ಮುಂದೆ ತೆಗೆಸಿರುವ ಫೋಟೋ ಮತ್ತು ವಿಡಿಯೋವನ್ನು ಸಂಯುಕ್ತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾನು ತಾಪಮಾನವನ್ನು ತಗ್ಗಿಸುತ್ತಿದ್ದೀನಾ ಅಥವಾ ಹೆಚ್ಚಿಸುತ್ತಿದ್ದೀನಾ ನನಗೆ ಗೊತ್ತಿಲ್ಲ ಎಂದು ಅಡಿಬರಹ ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಬೆಸ್ತುಬಿದ್ದಿದ್ದಾರೆ.
ಸಂಯುಕ್ತಾ ಹಾಟ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಕಾಲಿವುಡ್ ಸಿನಿಮಾಗಳ ಜತೆಗೆ ಕನ್ನಡದಲ್ಲಿಯೂ ಕ್ರೀಂ, ರಾಣಾ ಹಾಗೂ ತುರ್ತು ನಿರ್ಗಮನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)