More

    ಭಾರತೀಯರೇ ಎಚ್ಚರವಾಗಿರಿ… ಶತ್ರುಗಳು ಗಡಿಯಾಚೆಗಿಲ್ಲ, ನಮ್ಮ ಸುತ್ತಲೂ ಇದ್ದಾರೆ: ನಟಿ ಪ್ರಣಿತಾ ಸುಭಾಷ್​

    ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ನಟಿ ಪ್ರಣಿತಾ ಪೋಸ್ಟ್​ ಮಾಡಿರುವುದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

    ಆಫ್ಘನ್ ಘಟನೆಯನ್ನು ಮರೆಮಾಚಿ ತಮ್ಮನ್ನ ಸಮರ್ಥಿಸಿಕೊಳ್ಳಲು ಕೆಲವರು ಹಿಂದು ಟೆರರ್ (ಹಿಂದು ಉಗ್ರವಾದಿ) ಪದ ಬಳಸುತ್ತಿದ್ದಾರೆ. ಭಾರತೀಯರೇ ಎಚ್ಚರವಾಗಿರಿ… ಶತ್ರುಗಳು ನಮ್ಮ ಗಡಿಯಾಚೆಗೆ ಇರುವುದಿಲ್ಲ. ಅವರು ನಿಮ್ಮ ಸುತ್ತಲೂ ಇದ್ದಾರೆ ಎಂದು ಪ್ರಣಿತಾ ಟ್ವೀಟ್​ ಮಾಡಿದ್ದಾರೆ.

    ಬಾಲಿವುಡ್​ ನಟಿ ಸ್ವರಾ ಭಾಸ್ಕರ್ ಹಿಂದುತ್ವವನ್ನು ತಾಲಿಬಾನಿ ಉಗ್ರತ್ವಕ್ಕೆ ಹೋಲಿಕೆ ಮಾಡಿ ಮಾತನಾಡಿರುವ ಬೆನ್ನಲ್ಲೇ ಪ್ರಣಿತಾ ಟ್ವೀಟ್​ ಮಾಡಿರುವುದು ಕುತೂಹಲ ಮೂಡಿಸಿದೆ. ಅಲ್ಲದೆ, ನಟಿ ಸ್ವರಾ ಭಾಸ್ಕರ್​ ಬಂಧಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಹಗಳು ಕೇಳಿಬರುತ್ತಿವೆ.

    ಸ್ವರಾ ಭಾಸ್ಕರ್​ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದು, ಸದ್ಯ ಟ್ವಿಟರ್​ನಲ್ಲಿ ಹಿಂದುತ್ವ ಪದ ಟ್ರೆಂಡ್​ ಆಗಿದ್ದು, ಭಾರಿ ಚರ್ಚೆಯನ್ನು ಸೃಷ್ಟಿಸಿದೆ. ಆದರೆ, ಪ್ರಣಿತಾ ಯಾರನ್ನು ಉದ್ದೇಶಿಸಿ ಟ್ವೀಟ್​ ಮಾಡಿದ್ದಾರೆ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

    ಮಾತಿನ ಮೇಲೆ ಹಿಡಿತವಿಲ್ಲದ ಕಾಲಿವುಡ್​ ನಟಿ ಮೀರಾ ಮಿಥುನ್​ ಯೂಟ್ಯೂಬ್​ ಸಸ್ಪೆಂಡ್​..!

    ಅಯ್ಯೋ ದುರ್ವಿಧಿಯೇ! ದೇವಸ್ಥಾನದ ಬಳಿ ಕಾರು ನಿಲ್ಲಿಸಿ ಕಣ್ಣೀರಿಡುತ್ತಲೇ ಬದುಕಿಗೆ ವಿದಾಯ ಹೇಳಿದ ಶಿಕ್ಷಕ ದಂಪತಿ

    ಲೈಕಾ ಪ್ರೊಡಕ್ಷನ್ಸ್ ಕಂಪನಿಗೆ ಶಾಕ್ ಕೊಟ್ಟು​ ನಟ ವಿಶಾಲ್​ಗೆ ಬಿಗ್​ ರಿಲೀಫ್​ ನೀಡಿದ ಮದ್ರಾಸ್​ ಹೈಕೋರ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts