More

    ಅಮೆರಿಕ ಸ್ವಾತಂತ್ರ್ಯ ದಿನದ ಪರೇಡ್​ ವೇಳೆ ಗುಂಡಿನ ದಾಳಿ: 6 ಮಂದಿ ದುರ್ಮರಣ, 24 ಮಂದಿ ಸ್ಥಿತಿ ಗಂಭೀರ

    ನ್ಯೂಯಾರ್ಕ್​: ಯುನೈಟೆಡ್​ ಸ್ಟೇಟ್ಸ್​​ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ಚಿಕಾಗೋದಲ್ಲಿ ನಡೆದ ಪರೇಡ್​ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಪರಿಣಾಮ 6 ಮಂದಿ ಸಾವಿಗೀಡಾಗಿದ್ದು, 24 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಜುಲೈ 4 ರಂದು ಯುನೈಟೆಡ್​ ಸ್ಟೇಟ್ಸ್​ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಿಸಲಾಗುತ್ತದೆ. ಸ್ಥಳೀಯ ವರದಿಗಳ ಪ್ರಕಾರ, ಸಂಭ್ರಮಾಚರಣೆಗಳು ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಓರ್ವ ಬಂದೂಕುಧಾರಿಯು ಚಿಲ್ಲರೆ ಅಂಗಡಿಯ ಛಾವಣಿಯ ಮೇಲೆ ನಿಂತು ಪರೇಡ್​ ನಡೆಸುತ್ತಿದ್ದವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾನೆ.

    ಚಿಕಾಗೋದ ಶ್ರೀಮಂತ ಉಪನಗರವಾದ ಹೈಲ್ಯಾಂಡ್ ಪಾರ್ಕ್‌ನ ಬೀದಿಗಳಲ್ಲಿ ಗುಂಡು ಹಾರಿಸುತ್ತಿದ್ದಂತೆ ಪರೇಡ್​ನಲ್ಲಿ ಭಾಗವಹಿಸಿದ್ದವರು ಇದ್ದಕ್ಕಿದ್ದಂತೆ ಭಯಭೀತರಾಗಿ ಓಡಿಹೋಗುತ್ತಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ. ಕುಟುಂಬದ ಸದಸ್ಯರು ಪಾದಚಾರಿ ಮಾರ್ಗದಲ್ಲಿ ಕುಳಿತು ಪರೇಡ್​ ವೀಕ್ಷಿಸುತ್ತಿರುವುದು ವಿಡಿಯೋದಲ್ಲಿದೆ. ಗುಂಡಿನ ಮೊರೆತ ಕೇಳುತ್ತಿದ್ದಂತೆ ಎದ್ನೋ ಬಿದ್ನೋ ಅಂತಾ ಓಡಿ ಹೋಗಿರುವುದು, ಜನರ ಕಿರುಚಾಟ ಮತ್ತು ಹಿನ್ನಲೆಯಲ್ಲಿ ಗುಂಡಿನ ಶಬ್ದವನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

    ಘಟನಾ ಸಮಯದಲ್ಲಿ ಗಾಯಗೊಂಡ ಎರಡು ಡಜನ್ ಜನರನ್ನು ಹೈಲ್ಯಾಂಡ್ ಪಾರ್ಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ ಎಂದು ನಗರದ ಪೊಲೀಸ್ ಕಮಾಂಡರ್ ಕ್ರಿಸ್ ಓ ನೀಲ್ ಹೇಳಿದ್ದಾರೆ. ಗುಂಡಿನ ದಾಳಿಯ ಪರಿಣಾಮವಾಗಿ ಜುಲೈ 4ರ ಎಲ್ಲಾ ಉತ್ಸವಗಳನ್ನು ರದ್ದುಗೊಳಿಸಲಾಗಿದೆ ಎಂದು ಹೈಲ್ಯಾಂಡ್ ಪಾರ್ಕ್ ನಗರವು ಘೋಷಿಸಿತು.

    ಶಂಕಿತ ವ್ಯಕ್ತಿಯ ಬಂಧನ
    ಗುಂಡಿನ ದಾಳಿ ನಡೆಸಿದ ಶಂಕಿತ ವ್ಯಕ್ತಿಯನ್ನು ಬಂಧಿಸಿರುವುದಾಗಿ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು 22 ವರ್ಷದ ರಾಬರ್ಟ್ ಇ. ಕ್ರಿಮೊ ಎಂದು ಗುರುತಿಸಲಾಗಿದೆ. ಘಟನಾ ಪ್ರದೇಶದಲ್ಲೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. (ಏಜೆನ್ಸೀಸ್​)

    ನಾಯಕತ್ವ ಬದಲಾಗಲ್ಲ, ಸಂಪುಟ ವಿಸ್ತರಿಸಲ್ಲ: ಸಿಎಂ-ರಾಜ್ಯಾಧ್ಯಕ್ಷ ಸ್ಥಾನ ಸೇರಿ ಎಲ್ಲವೂ ಯಥಾಸ್ಥಿತಿ..

    ವಿಶ್ವಾಸ ಗೆದ್ದ ಶಿಂಧೆ ಸರ್ಕಾರ!; ಅನರ್ಹತೆ ಭೀತಿ ಕಾರಣ ಮತ ಚಲಾಯಿಸದ ಹಲವು ಶಾಸಕರು..

    ಜೈಲಿಂದಲೇ ಹಂತಕರ ವಿಡಿಯೋ ಕಾಲ್: ಮನೆಗೆ ಕರೆ ಮಾಡಿದ ಹರ್ಷನ ಹತ್ಯೆ ಆರೋಪಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts