ಪಬ್​ಜಿ ಆಡುವುದನ್ನು ತಡೆದಿದ್ದಕ್ಕೆ ಹೆತ್ತತಾಯಿಗೆ ಗುಂಡಿಟ್ಟು ಹತ್ಯೆ ಮಾಡಿದ 16 ವರ್ಷದ ಮಗ

pubg
Published on

ಲಖನೌ: ಪಬ್​ಜಿ ಆಡುವುದನ್ನು ತಡೆದಿದ್ದಕ್ಕೆ ಆಕ್ರೋಶಗೊಂಡ 16 ವರ್ಷದ ಹುಡುಗ ಹೆತ್ತ ತಾಯಿಗೆ ಗುಂಡಿಟ್ಟು ಹತ್ಯೆ ಮಾಡಿರುವ ಆತಂಕಕಾರಿ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ.

ಮನೆಯಲ್ಲಿದ್ದ ತಂದೆ ಪಿಸ್ತೂಲ್​ ತೆಗೆದುಕೊಂಡು ತಾಯಿಗೆ ಗುಂಡು ಹಾರಿಸಿದ್ದಾನೆ. ಆರೋಪಿ ಹುಡುಗ ಪಬ್​ಜಿ ಗೇಮ್​ಗೆ ದಾಸನಾಗಿದ್ದ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.

ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋದಾಗ ಹುಡುಗನ ತಾಯಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದಳು. ಈ ವೇಳೆ ಆರೋಪಿಯ ವಿಚಾರಣೆ ನಡೆಸಿದಾಗ ಆತ ತನಿಖೆಯ ದಾರಿ ತಪ್ಪಿಸಲು ಯತ್ನಿಸಿದ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯನ್ನು ಸದ್ಯ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ವಿವರವಾಗಿ ತನಿಖೆ ಮಾಡಲಾಗುವುದು ಎಂದು ಪೂರ್ವ ಲಖನೌದ ಎಡಿಸಿಪಿ ಖಾಸಿಮ್​ ಅಬಿದಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net