More

    ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ: ದೀಪಾವಳಿ ಆಚರಿಸಲು ಊರಿಗೆ ಬರ್ತಿದ್ದ 15 ಕಾರ್ಮಿಕರು ದುರ್ಮರಣ

    ರೇವಾ: ಬಸ್​ ಮತ್ತು ಟ್ರಕ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 15 ಮಂದಿ ದುರಂತ ಸಾವಿಗೀಡಾಗಿದ್ದು, 40ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಹೆದ್ದಾರಿಯಲ್ಲಿ ನಡೆದಿದೆ.

    ಬಸ್​ನಲ್ಲಿ ಸುಮಾರು 100 ಮಂದಿ ಪ್ರಯಾಣಿಕರಿದ್ದರು. ಉತ್ತರ ಪ್ರದೇಶದ ಗೋರಖ್​ಪುರಕ್ಕೆ ತೆರಳುವಾಗ ಶುಕ್ರವಾರ ತಡರಾತ್ರಿ ರೇವಾ ಜಿಲ್ಲೆಯ ಸುಹಾಗಿ ಪಹಾರಿ ಬಳಿ ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಈ ಮೊದಲೇ ಅಪಘಾತ ಸಂಭವಿಸಿದ್ದ ಕಾರಣ ಟ್ರಕ್ ಹೆದ್ದಾರಿಯಲ್ಲಿ ಸಿಲುಕಿಕೊಂಡಿತ್ತು. ಅದೇ ಟ್ರಕ್​ ಹಿಂಬದಿಗೆ ಬಸ್​ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಾಯಾಳುಗಳನ್ನು ಸುಹಾಗಿ ಪಹಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವವರನ್ನು ರೇವಾದ ಸಂಜಯ್​ ಗಾಂಧಿ ಮೆಮೊರಿಯಲ್​ ಆಸ್ಪತ್ರೆಗೆ ದಾಖಲಿಸಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

    ಬಸ್​ನಲ್ಲಿ ಪ್ರಯಾಣ ಬೆಳೆಸುತ್ತಿದ್ದವರಲ್ಲಿ ಬಹುತೇಕರು ಉತ್ತರ ಪ್ರದೇಶ ಮೂಲದ ಕಾರ್ಮಿಕರು. ಹೈದರಾಬಾದ್​ನಿಂದ ಪ್ರತ್ಯೇಕ ಬಸ್​ನಲ್ಲಿ ಮಧ್ಯಪ್ರದೇಶದ ಕಾಟ್ನಿಗೆ ಬಂದಿಳಿದಿದ್ದ ಕಾರ್ಮಿಕರು, ಅಲ್ಲಿಂದ ಮತ್ತೊಂದು ಬಸ್​ ಏರಿದ್ದರು. ಎಲ್ಲರು ದೀಪಾವಳಿ ಹಿನ್ನೆಲೆಯಲ್ಲಿ ಸಂತೋಷದಿಂದ ತಮ್ಮ ತವರಿಗೆ ಮರಳುತ್ತಿದ್ದರು ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ತಿಳಿಸಿದ್ದಾರೆ.

    ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂದು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

    ಅಪಘಾತದ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಮೃತದೇಹಗಳನ್ನು ಅವರವರ ಮನೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಅಧಿಕಾರಿಗಳು ತಿಳಿಸಿದ್ದಾರೆ. ದೀಪಾವಳಿ ಹಬ್ಬದ ಖುಷಿಯಲ್ಲಿದ್ದ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದ್ದು, ಮೃತರ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ಏಜೆನ್ಸೀಸ್​)

    ದೀಪಾವಳಿ ಗಿಫ್ಟ್​: ಈ ರಾಜ್ಯದಲ್ಲಿ ಅ.27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ್ರು ಯಾವುದೇ ದಂಡ ವಿಧಿಸಲ್ಲ!

    ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸಿದ ಆರೋಪ: ಉಪನ್ಯಾಸಕನ ವಿರುದ್ಧ FIR, ಕಾಲೇಜಿನಿಂದ ಸಸ್ಪೆಂಡ್​

    ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಎಸ್ಕೇಪ್​ ಆಗಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts