ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಎಸ್ಕೇಪ್​ ಆಗಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ!

ಕೊಚ್ಚಿ: ಸ್ನೇಹಿತನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪದ ಮೇಲೆ ಪೊಲೀಸ್​ ಪೇದೆಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ಶುಕ್ರವಾರ (ಅ.21) ನಡೆದಿದೆ. ಬಂಧಿತ ಪೇದೆಯನ್ನು ಅಮಲ್​ ದೇವ್​ ಎಂದು ಗುರುತಿಸಲಾಗಿದೆ. ಈತ ಕೊಚ್ಚಿಯ ಎ.ಆರ್​. ಕ್ಯಾಂಪ್​ನಲ್ಲಿ ಕಾನ್ಸ್​ಟೇಬಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದ. ಎರ್ನಾಕುಲಂನ ಜರಾಕಲ್​ನಲ್ಲಿರುವ ಸ್ನೇಹಿತ ನಟೇಸನ್​ ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ಕದ್ದ ಚಿನ್ನಾಭರಣಗಳು ನಟೇಸನ್​ ಅವರ ಸೊಸೆಗೆ ಸಂಬಂಧಿಸಿದ್ದಾಗಿವೆ. ಸುಮಾರು 10 ಸವರನ್​ ಚಿನ್ನ ಕಳ್ಳತವಾಗಿದೆ. ಮನೆಗೆ ಬಂದಿದ್ದ ಅಮಲ್​, ಚಿನ್ನಾಭರಣ ಕದ್ದು … Continue reading ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಎಸ್ಕೇಪ್​ ಆಗಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ!