More

    ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಎಸ್ಕೇಪ್​ ಆಗಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ!

    ಕೊಚ್ಚಿ: ಸ್ನೇಹಿತನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪದ ಮೇಲೆ ಪೊಲೀಸ್​ ಪೇದೆಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ಶುಕ್ರವಾರ (ಅ.21) ನಡೆದಿದೆ.

    ಬಂಧಿತ ಪೇದೆಯನ್ನು ಅಮಲ್​ ದೇವ್​ ಎಂದು ಗುರುತಿಸಲಾಗಿದೆ. ಈತ ಕೊಚ್ಚಿಯ ಎ.ಆರ್​. ಕ್ಯಾಂಪ್​ನಲ್ಲಿ ಕಾನ್ಸ್​ಟೇಬಲ್​ ಆಗಿ ಕಾರ್ಯನಿರ್ವಹಿಸುತ್ತಿದ್ದ. ಎರ್ನಾಕುಲಂನ ಜರಾಕಲ್​ನಲ್ಲಿರುವ ಸ್ನೇಹಿತ ನಟೇಸನ್​ ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ.

    ಕದ್ದ ಚಿನ್ನಾಭರಣಗಳು ನಟೇಸನ್​ ಅವರ ಸೊಸೆಗೆ ಸಂಬಂಧಿಸಿದ್ದಾಗಿವೆ. ಸುಮಾರು 10 ಸವರನ್​ ಚಿನ್ನ ಕಳ್ಳತವಾಗಿದೆ. ಮನೆಗೆ ಬಂದಿದ್ದ ಅಮಲ್​, ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಸಂಬಂಧ ನಟೇಸನ್​ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪರಾರಿಯಾಗಿದ್ದ ಆರೋಪಿ ಅಮಲ್​ನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಅಮಲ್​ಗೆ ಸಾಕಷ್ಟು ಸಾಲ ಇರುವುದಾಗಿ ತಿಳಿದುಬಂದಿದೆ. ಆನ್​ಲೈನ್​ ಜೂಜಿನ ಚಟ ಅಂಟಿಸಿಕೊಂಡಿದ್ದ ಅಮಲ್​, ಸಾಲವನ್ನು ತೀರಿಸಲು ಕಳ್ಳತನ ಮಾಡಿದ್ದಾನೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ.

    ಇನ್ನೊಂದು ಪ್ರಕರಣದಲ್ಲಿ ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಪೊಲೀಸ್​ ಅಧಿಕಾರಿಯನ್ನು ಆರೋಪಿ ಎಂದು ಹೆಸರಿಸಲಾಗಿದ್ದು, ಈ ಪ್ರಕರಣವನ್ನು ಕೋರ್ಟ್​ನಲ್ಲಿ ಇತ್ಯರ್ಥಪಡಿಸಲಾಗಿದೆ. ಇಡುಕ್ಕಿ ಎಆರ್ ಕ್ಯಾಂಪ್​ನ ಪೊಲೀಸ್ ಪೇದೆ ಪಿ.ವಿ.ಶಿಹಾಬ್ ಸೆ.30ರಂದು ಕಂಜಿರಪಲ್ಲಿಯ ಹಣ್ಣಿನ ಅಂಗಡಿಗೆ ನುಗ್ಗಿ ಮಾವಿನ ಹಣ್ಣುಗಳನ್ನು ಕಳವು ಮಾಡಿದ್ದರು. ಕೆಜಿಗೆ 600 ರೂ.ಮೌಲ್ಯದ ಸುಮಾರು 10 ಕೆಜಿ ಮಾವಿನ ಹಣ್ಣನ್ನು ಶಿಹಾಬ್ ಕದ್ದಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯಿಂದ ಈ ಪ್ರಕರಣ ಬೆಳಕಿಗೆ ಬಂದಿತು. ಇದಾದ ಬಳಿಕ ಅಕ್ಟೋಬರ್ 3 ರಂದು ಕೇರಳ ಡಿಜಿಪಿ, ಆರೋಪಿ ಶಿಹಾಬ್​ನನ್ನು ಅಮಾನತುಗೊಳಿಸಿದ್ದಾರೆ.

    ಕಂಜಿರಪಲ್ಲಿಯ ಹಣ್ಣು ಮಾರಾಟಗಾರ ಕಂಜಿರಪಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತನಗಾದ ನಷ್ಟವನ್ನು ಭರಿಸುವಂತೆ ಕೇಳಿಕೊಂಡಿದ್ದರು. ಹಣ್ಣು ಮಾರಾಟಗಾರನ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್​ ಪ್ರಕರಣವನ್ನು ಇತ್ಯರ್ಥಪಡಿಸಿದೆ. (ಏಜೆನ್ಸೀಸ್​)

    ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್​ ಅಧಿಕಾರಿಯ ಸುಳಿವೇ ಇಲ್ಲ: ಕೋರ್ಟ್​ ಮೆಟ್ಟಿಲೇರಿದ ಹಣ್ಣು ಮಾರಾಟಗಾರ

    ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್​ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು

    50 ಸಾವಿರ ನಕಲಿ ಕ್ಲಿನಿಕ್; ನಕಲಿ ಸರ್ಟಿಫಿಕೇಟ್: ಭ್ರಷ್ಟ ರಿಜಿಸ್ಟ್ರಾರ್​ಗಳ ರಕ್ಷಣೆಗೆ ನಿಂತ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts