More

    ದೀಪಾವಳಿ ಗಿಫ್ಟ್​: ಈ ರಾಜ್ಯದಲ್ಲಿ ಅ.27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ್ರು ಯಾವುದೇ ದಂಡ ವಿಧಿಸಲ್ಲ!

    ಅಹಮದಾಬಾದ್​: ದೀಪಾವಳಿ ಹಬ್ಬದ ಖುಷಿಯನ್ನು ದುಪ್ಪಟ್ಟಾಗಿಸಲು ಗುಜರಾತ್​ ಸರ್ಕಾರ ವಿಶೇಷ ಉಡುಗೊರೆ ಒಂದನ್ನು ಘೋಷಿಸಿದೆ. ಅಕ್ಟೋಬರ್​ 21 ರಿಂದ 27ರವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೂ ಕೂಡ ಯಾವುದೇ ದಂಡವನ್ನು ವಿಧಿಸುವುದಿಲ್ಲ ಎಂದು ಗುಜರಾತ್​ ರಾಜ್ಯದ ಗೃಹ ಸಚಿವ ಹರ್ಷ ಸಾಂಘ್ವಿ ಶುಕ್ರವಾರ (ಅ.21) ಘೋಷಣೆ ಮಾಡಿದ್ದಾರೆ.

    ಅಕ್ಟೋಬರ್ 21 ರಿಂದ ಅಕ್ಟೋಬರ್ 27 ರವರೆಗೆ ಗುಜರಾತ್ ಟ್ರಾಫಿಕ್ ಪೊಲೀಸರು ನಾಗರಿಕರ ಮೇಲೆ ಯಾವುದೇ ದಂಡವನ್ನು ವಿಧಿಸುವುದಿಲ್ಲ. ಯಾವುದೇ ನಾಗರಿಕರು ಹೆಲ್ಮೆಟ್ ಅಥವಾ ಪರವಾನಗಿ ಇಲ್ಲದೆ ಸಿಕ್ಕಿಬಿದ್ದರೆ ಅಥವಾ ಯಾವುದೇ ಸಂಚಾರ ನಿಯಮಗಳ ಉಲ್ಲಂಘನೆಯಾಗಿದ್ದರೆ, ಈ ಅವಧಿಯಲ್ಲಿ ಪೊಲೀಸರು ಅವರಿಗೆ ಸಲಹೆ ನೀಡುತ್ತಾರೆ ಹೊರತು ದಂಡವನ್ನು ಸ್ವೀಕರಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.

    ಈ ಘೋಷಣೆಯ ಅರ್ಥ ನೀವು (ಸಾರ್ವಜನಿಕರು) ಸಂಚಾರ ನಿಯಮಗಳನ್ನು ಅನುಸರಿಸಬಾರದು ಎಂದಲ್ಲ, ಆದರೆ ನೀವು ಈ ಕಾಲಮಿತಿಯಲ್ಲಿ ತಪ್ಪು ಮಾಡಿದರೆ, ನೀವು ಅದಕ್ಕೆ ದಂಡವನ್ನು ಪಾವತಿಸಬೇಕಾಗಿಲ್ಲ ಎಂದು ಸಾಂಘ್ವಿ ಹೇಳಿದರು. ಅಲ್ಲದೆ, ಸಂಚಾರ ನಿಯಮ ಪಾಲಿಸುವಂತೆಯೂ ಜನರ ಬಳಿಕ ಕೋರಿದರು.

    ಗುಜರಾತ್‌ ಸರ್ಕಾರ ಈ ನಿರ್ಧಾರವನ್ನು ಅನೇಕ ಜನರು ಶ್ಲಾಘಿಸಿದರೆ, ಕೆಲವರು ಚುನಾವಣಾ ಸಮಯದಲ್ಲಿ ಹೆಚ್ಚಿನ ಮತಗಳನ್ನು ಗಳಿಸುವ ಗಿಮಿಕ್ ಎಂದು ಕರೆದಿದ್ದಾರೆ.

    ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಸಿಂಗ್ ಚೌಧರಿ ಮಾತನಾಡಿದ್ದು, ಮುಂಬರುವ ಚುನಾವಣೆಗಳಲ್ಲಿ ತಮ್ಮ ಮತ ಬ್ಯಾಂಕ್ ಅನ್ನು ಹೆಚ್ಚಿಸುವುದಕ್ಕಾಗಿ 2022ರ ದೀಪಾವಳಿ ಹಬ್ಬದ ಋತುವಿನಲ್ಲಿ ಬಿಜೆಪಿ, ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದೆ ಎಂದು ಹೇಳಿದ್ದಾರೆ. ಮತಕ್ಕಾಗಿ ವಾಹನ ಸವಾರರ ಜೀವವನ್ನು ಅಪಾಯಕ್ಕೆ ದೂಡುವುದು ಸರಿಯಲ್ಲ ಎಂದಿದ್ದಾರೆ.

    ಸಾಮಾನ್ಯವಾಗಿ ಗುಜರಾತ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡವು 1000 ರೂ.ನಿಂದ 5000 ರೂ.ಗಳವರೆಗೆ ಇರುತ್ತದೆ. ಆದರೆ, ದೀಪಾವಳಿ ಹಬ್ಬದ ಸಮಯದಲ್ಲಿ ಒಂದು ವಾರದವರೆಗೆ ಸಂಚಾರ ನಿಯಮ ಉಲ್ಲಂಘಿಸುವವರಿಗೆ ದಂಡವನ್ನು ಅಮಾನತುಗೊಳಿಸಲು ಸರ್ಕಾರ ನಿರ್ಧರಿಸಿದೆ. (ಏಜೆನ್ಸೀಸ್​)

    ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಎಸ್ಕೇಪ್​ ಆಗಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ!

    ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್​ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು

    50 ಸಾವಿರ ನಕಲಿ ಕ್ಲಿನಿಕ್; ನಕಲಿ ಸರ್ಟಿಫಿಕೇಟ್: ಭ್ರಷ್ಟ ರಿಜಿಸ್ಟ್ರಾರ್​ಗಳ ರಕ್ಷಣೆಗೆ ನಿಂತ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts