More

    ದೀಪಾವಳಿಯಲ್ಲಿ ಗಾಳಿಯ ಗುಣಮಟ್ಟ ಕಳಪೆ: ವಾಯು ಮಾಲಿನ್ಯಗಿಂತ ಶಬ್ಧದಿಂದ ಜನರಿಗೆ ಕಿರಿಕಿರಿ

    ಬೆಂಗಳೂರು:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವ ನಡುವೆಯೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನ ಕಾಲ ವಾಯು ಗುಣಮಟ್ಟ ಸೂಚ್ಯಂಕ( ಎಕ್ಯೂಐ) ಹೆಚ್ಚಳವಾಗಿ ಕಳಪೆ ಮಟ್ಟಕ್ಕೆ ತಲುಪಿದೆ.

    ದೀಪಾವಳಿ ಹಬ್ಬ ನಿಮಿತ್ತ ಸಾರ್ವಜನಿಕರು ಪಟಾಕಿ ಸುಟ್ಟಿದ ಪರಿಣಾಮ ನ.12ರಿಂದ ನ.14ರವರೆಗೆ ರಾಜ್ಯದ ಇತರೆ ಜಿಲ್ಲೆಗಳಗಿಂತ ಬೆಂಗಳೂರಿನ ಜಯನಗರದಲ್ಲಿ ಅತಿ ಹೆಚ್ಚು ಎಕ್ಯೂಐ ದಾಖಲಾಗಿದೆ. ಮಂಗಳೂರು ಬೀದರ್, ತುಮಕೂರು ಕ್ರಮವಾಗಿ ನಂತರ ಸ್ಥಾನಗಳಿವೆ. ಮಡಿಕೇರಿಯಲ್ಲಿ ಎಕ್ಯೂಐ ವಾಲ್ಯೂ 49 ದಾಖಲಾಗಿದ್ದು, ಗಾಳಿ ಗುಣಮಟ್ಟ ಉತ್ತಮವಾಗಿತು. ಕೆಲ ಜಿಲ್ಲೆಗಳಲ್ಲಿ ಉಸಿರಾಡಲು ಯೋಗ್ಯವಾದ ಗಾಳಿ ಗುಣಮಟ್ಟ ಕುಸಿದರೆ, ಇನ್ನೂ ಹಲವೆಡೆ ಗಾಳಿ ಗುಣಮಟ್ಟ ತೃಪ್ತಿಕರವಾಗಿತ್ತು. ಅಲ್ಲದೆ, ರಾಜ್ಯದ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ 49ರಿಂದ 268ರವರೆಗೆ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ಕಳೆದ ವರ್ಷದ ದೀಪಾವಳಿ ಅವಧಿಗೆ ಉಂಟಾಗಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಬಾರಿ ಇದೇ ಅವಧಿಯಲ್ಲಿ ಎಕ್ಯೂಐ ಮಟ್ಟ ಕಡಿಮೆ ಆಗಿರುವುದು ಗಮನಾರ್ಹ. 2022ರಲ್ಲಿ ಅತಿ ಹೆಚ್ಚು 313 ಎಕ್ಯೂಐ ದಾಖಲಾಗಿತ್ತು. ಈ ಬಾರಿ 268ಎಕ್ಯೂಐ ದಾಖಲಾಗಿದೆ.

    ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿ ದೇಶದ ಇತರೆ ಕಡೆಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಪಟಾಕಿ ಸರಬರಾಜು ತಡೆಗೆ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಕಡ್ಡಾಯವಾಗಿ ಮಳಿಗೆಗಳಲ್ಲಿ ಅಗ್ನಿನಂದಕ ಹೊಂದಿರಬೇಕು ಮತ್ತು ಪರವಾನಗಿದಾರರು ರಾತ್ರಿ ವೇಳೆ ಪಟಾಕಿ ಮಾರಬಾರದು ಸೇರಿ ವಿವಿಧ ಕಟ್ಟುನಿಟ್ಟಿನ ಷರತ್ತುಗಳನ್ನು ಹಾಕಲಾಗಿತ್ತು. ಈ ಬಾರಿ ಪಟಾಕಿ ಮಳಿಗೆಗೆ ಅನುಮತಿ ನೀಡುವ ಜವಾಬ್ದಾರಿಯನ್ನು ಬಿಬಿಎಂಪಿ, ಪೊಲೀಸ್ ಇಲಾಖೆಗೆ ನೀಡಿತ್ತು. 400ಕ್ಕೂ ಅಧಿಕ ಪಾಲಿಕೆ ವ್ಯಾಪ್ತಿಯ ಮೈದಾನಗಳ ಪಟ್ಟಿ ನೀಡಿ ಸುರಕ್ಷತಾ ದೃಷ್ಟಿಯಿಂದ ಯಾವ ಮೈದಾನದಲ್ಲಿ ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡಬಹುದು ಎಂಬ ಬಗ್ಗೆ ನಿರ್ಧರಿಸುವಂತೆ ಪಾಲಿಕೆ ಕೋರಿತ್ತು. ಇದರಲ್ಲಿ 62 ಮೈದಾನಗಳಲ್ಲಿ ಹಸಿರು ಪಟಾಕಿ ಮಾರಲು ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿತ್ತು. ನಿಯಮ ಉಲ್ಲಂಸಿದರೆ ಪರವಾನಗಿ ರದ್ದುಪಡಿಸುವ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು. ಸಾರ್ವಜನಿಕರಿಗೆ ಹಸಿರು ಪಟಾಕಿ ಬಗ್ಗೆ ಅರಿವು ಬಂದಿರುವ ಕಾರಣ ಈ ಬಾರಿ ಅಷ್ಟೇನೂ ವಾಯು ಮಾಲಿನ್ಯ ಉಂಟಾಗಿಲ್ಲ.

    ಬೆಂಗಳೂರು ನಗರವೇ ಹೆಚ್ಚು ಮಲಿನ:
    ಬೆಂಗಳೂರು ನಗರದ ಜಯನಗರ, ಸಿಲ್ಕ್ ಬೋರ್ಡ್, ಮೈಸೂರು ರಸ್ತೆಯ ಕವಿಕಾ, ಜಿಗಣಿ, ನಿಮ್ಹಾನ್ಸ್, ಹೆಬ್ಬಾಳ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸೇರಿ ಹಲವು ಪ್ರದೇಶಗಳಲ್ಲಿ ಗಾಳಿಯ ಮಟ್ಟ ಕುಸಿತವಾಗಿದ್ದು, ಕಳಪೆ ಮಟ್ಟಕ್ಕೆ ತಲುಪಿತು. ಕಳೆದ ವರ್ಷ ಮೇಲಿನ ಪ್ರದೇಶಗಳಲ್ಲಿ ಅತಿ ಕಳಪೆ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿತ್ತು.ನ.12ರಿಂದ ನ.14ರವರೆಗೆ ನಗರದ ಹಲವು ಪ್ರದೇಶಗಳಲ್ಲಿ ಎಕ್ಯೂಐ 150ರಿಂದ 268ವರೆಗೆ ದಾಖಲಾಗಿದೆ. ಈ ಬಾರಿ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಗಾಳಿಯ ಮಟ್ಟ ತೃಪ್ತಿಕರವಾಗಿತ್ತು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ನೀಡಿದೆ.

    ಇದನ್ನೂ ಓದಿ: ದೀಪಾವಳಿ ಹಬ್ಬದಂದು ‘ಬ್ಯಾಡ್​ ಮ್ಯಾನರ್ಸ್​’ ಸರಪಟಾಕಿ ! ಢಂ ಢಂ ಸೌಂಡ್​ ನಡುವೆ ಅಭಿ​ ಡಿಶುಂ ಡಿಶುಂ ಫೈಟ್​

    ಮಾಲಿನ್ಯಗಿಂತ ಶಬ್ಧ ಹೆಚ್ಚು:
    ಈ ಬಾರಿ ದೀಪಾವಳಿಯಲ್ಲಿ ಮಾಲಿನ್ಯಗಿಂತ ಪಟಾಕಿಗಳಿಂದ ಶಬ್ಧ ಮಾಲಿನ್ಯ ಹೆಚ್ಚಿತ್ತು. ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಇದೇ ಅವಧಿಯಲ್ಲಿ ಶಬ್ಧ ಮಾಲಿನ್ಯವು ಜನರಿಗೆ ಹೆಚ್ಚು ಕಿರಿಕಿರಿ ಉಂಟು ಮಾಡಿತ್ತು. ರಾಜ್ಯದಲ್ಲೇ ಮಂಗಳೂರಿನಲ್ಲೇ ಪಟಾಕಿಗಳಿಂದ ಅತಿ ಹೆಚ್ಚು ಶಬ್ಧ ಮಾಲಿನ್ಯ ಉಂಟಾಯಿತು. ಬೆಂಗಳೂರು,ರಾಮನಗರ, ನೆಲಮಂಗಲ, ಕೋಲಾರ,ಚಿಕ್ಕಬಳ್ಳಾಪುರ, ಧಾರವಾಡ, ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಮೈಸೂರು, ದಾವಣಗೆರೆ, ಬೀದರ್, ಕಲಬುರಗಿಯಲ್ಲಿ ಶಬ್ಧ ತೀವ್ರತೆ ಇತ್ತು.

    ಎಕ್ಯೂಐ ವಾಲ್ಯೂ ಲೆಕ್ಕಚಾರ ಹೇಗೆ?
    ಎಕ್ಯೂಐ ವಾಲ್ಯೂ 50ರ ಒಳಗಡೆ ಇದ್ದರೆ ಗಾಳಿ ಗುಣಮಟ್ಟ ಉತ್ತಮ, 51ರಿಂದ 100ರೊಳಗೆ ಇದ್ದರೆ ತೃಪ್ತಿಕರ, 101 ರಿಂದ 200ರವರೆಗೆ ಇದ್ದರೆ ಸಾಧಾರಣ, 201 ರಿಂದ 300 ಇದ್ದರೆ ಕಳಪೆ ಹಾಗೂ 401ಗಿಂತ ಮೇಲ್ಪಟ್ಟ ಸೂಚ್ಯಂಕವಿದ್ದರೆ ಅತಿ ಕಳಪೆ ಎಂದು ಗುರುತಿಸಲಾಗುತ್ತದೆ.

    ಎಕ್ಯೂಐ ವಿವರ
    ಜಿಲ್ಲೆ ಎಕ್ಯೂಐ
    ಬೆಂಗಳೂರು 234
    ಮಂಗಳೂರು 180
    ಬೀದರ್ 177
    ತುಮಕೂರು 168
    ದಾವಣಗೆರೆ 152
    ಚಿಕ್ಕಬಳ್ಳಾಪುರ 142
    ಹಾವೇರಿ 145
    ಯಾದಗಿರಿ 132
    ರಾಯಚೂರು 150
    ಹುಬ್ಬಳ್ಳಿ 146
    ಹಾವೇರಿ  145

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts