ಹಣಕಾಸು ಸಾಕ್ಷರತೆ ಭವಿಷ್ಯಕ್ಕೆ ದಾರಿ : ವಿವಿಯಲ್ಲಿ ಪ್ರೊ.ಪ್ರಶಾಂತ ನಾಯಕ್ ಅಭಿಮತ

Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಹಣಕಾಸು ಸಾಕ್ಷರತೆ ಎಂಬುದು ಕೇವಲ ಅಂಕಿಅಂಶಗಳ ವಿಷಯವಲ್ಲ, ಜನತೆ ತಮ್ಮ ಭವಿಷ್ಯ ನಿಯಂತ್ರಿಸಲು, ಆತ್ಮವಿಶ್ವಾಸದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಕನಸುಗಳನ್ನು ನನಸಾಗಿಸಲು ಸಹಾಯ ಮಾಡುವ ಜ್ಞಾನ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ಪ್ರಶಾಂತ ನಾಯಕ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ, ವಾಣಿಜ್ಯ ವಿಭಾಗ, ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ತು ಝೆರೋಧಾ ಮಾರ್ಸಿಟಿಯ ಆಶ್ರಯದಲ್ಲಿ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಣಕಾಸು ಸಾಕ್ಷರತೆ ಕೇವಲ ಗಳಿಸುವಿಕೆ ಮಾತ್ರವಲ್ಲದೆ, ಬೆಳೆಸುವಿಕೆ ಮತ್ತು ಬುದ್ಧಿವಂತಿಕೆಯಿಂದ ಬಳಸುವಿಕೆಯನ್ನೂ ಕಲಿಸುತ್ತದೆ ಎಂದರು.

ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ.ಪ್ರೀತಿ ಕೀರ್ತಿ ಡಿಸೋಜಾ ಮಾತನಾಡಿದರು. ಕ್ಯೂಶಾಲಾದ ಮುಖ್ಯ ಸಂಯೋಜಕ ಅರ್ಚನಾ ರಸಪ್ರಶ್ನೆ ನಡೆಸಿಕೊಟ್ಟರು. ಕ್ಯೂಶಾಲಾ ಮಾರಾಟ ವ್ಯವಸ್ಥಾಪಕಿ ಅಲ್ವಿನ್ ಲೋಬೊ, ಸಂಯೋಜಕಿ ಫ್ಲಾವಿಯಾ ರೀನಾ ಮತ್ತು ಶಾಹುಲ್ ಪಾರ್ಥಿಪಾಡಿ ಹಾಗೂ ಡಾ.ವೆಂಕಟೇಶ್ ಎಚ್.ಎಸ್. ಉಪಸ್ಥಿತರಿದ್ದರು. ಡಾ.ಲವೀನಾ ಕೆ.ಬಿ. ನಿರೂಪಿಸಿದರು.

400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

ರಸಪ್ರಶ್ನೆ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳ 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಥಮಿಕ ಸುತ್ತಿನಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಪ್ರವೇಶಿಸಿದರು.

ನಾವು ಹಣವನ್ನು ಅರ್ಥಮಾಡಿಕೊಂಡಾಗ ಅದಕ್ಕೆ ಗುಲಾಮರಾಗದೆ ಭವಿಷ್ಯದ ಯಜಮಾನರಾಗುತ್ತೇವೆ. ಹಣಕಾಸು ಸಾಕ್ಷರತೆ ಕೇವಲ ಜೀವನವನ್ನಷ್ಟೇ ಅಲ್ಲ, ತಲೆಮಾರುಗಳ ಭವಿಷ್ಯವನ್ನೂ ಬದಲಾಯಿಸುತ್ತದೆ. ಡಾ.ಪ್ರೀತಿ ಕೀರ್ತಿ ಡಿಸೋಜಾ, ವಾಣಿಜ್ಯ ವಿಭಾಗ ಮುಖ್ಯಸ್ಥೆ https://www.vijayavani.net/protest-133 https://www.vijayavani.net/chess-competition-3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net