ದೇವಳ ಅಭಿವೃದ್ಧಿಗೆ ತಾಂಬೂಲ ಪ್ರಶ್ನೆ – ಏಕಾದಶ ಕೋಟಿ ರುದ್ರಮಂತ್ರ ಜಪ ನಡೆಸಲು ಸೂಚನೆ – ವಿವಿಧ ವಿಚಾರದಲ್ಲಿ ಚಿಂತನೆ

blank

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಭಾನುವಾರ ಜೋತಿಷಿ ನಿಟ್ಟೆ ಪ್ರಸನ್ನ ಆಚಾರ್ಯ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು.

ಮಹಾಲಿಂಗೇಶ್ವರನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಅನ್ನಛತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ದೈವಜ್ಞರಿಗೆ ತಾಂಬೂಲ ನೀಡುವ ಮೂಲಕ ಚಿಂತನೆಗೆ ಚಾಲನೆ ನೀಡಲಾಯಿತು. ಆರೂಢ ರಾಶಿಯಾಗಿ ಮಕರ ಬಂದಿದ್ದು, ೨೬ ವೀಳ್ಯದೆಲೆ ನೀಡಲಾಗಿತ್ತು. ದೈವಜ್ಞರ ಸಹಾಯಕ ಶ್ರೀನಿವಾಸ ಭಟ್, ಗೋಪಾಲಕೃಷ್ಣ ಭಟ್ ಪಡೀಲು ಪ್ರಶ್ನಾಚಿಂತನೆ ವಿಮರ್ಶೆಯಲ್ಲಿ ಪಾಲ್ಗೊಂಡರು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ವಿ.ಎಸ್. ಭಟ್ ಚಿಂತನಾ ಇದ್ದರು.

ಕೆರೆ, ಕಟ್ಟೆಗಳ ಅಭಿವೃದ್ಧಿ, ಅಶ್ವತ್ಥ ಕಟ್ಟೆ ದುರಸ್ತಿ, ಸಭಾಭವನದ ಬಳಕೆ ವಿಚಾರದಲ್ಲಿ ಚಿಂತನೆ ನಡೆಯಿತು. ಅತಿರುದ್ರ ಯಾಗ, ಏಕಾದಶ ಕೋಟಿ ರುದ್ರಮಂತ್ರ ಜಪ ನಡೆಸಬೇಕು. ಭಕ್ತರಿಂದ ಒಂದು ದಿನ ಭಜನೆ ನಡೆಯಬೇಕು ಎಂಬ ಪರಿಹಾರಗಳು ಕಾಣಿಸಿದೆ. ಸಭಾಭವನವನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಹಾಗೂ ವಿದ್ಯಾರ್ಥಿಗಳ ಕಾರ್ಯಕ್ರಮಕ್ಕೆ ಬಳಕೆ ಮಾಡಬಹುದೆಂಬ ಸೂಚನೆ ನೀಡಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ., ನಳಿನಿ ಪಿ.ಶೆಟ್ಟಿ, ಈಶ್ವರ ಬೇಡೆಕರ್,ಕೃಷ್ಣವೇಣಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ರವಿಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ದೇವಳದ ಛತ್ರಿ ಪರಿಚಾರಕ ನಾರಾಯಣ ಶಗ್ರಿತ್ತಾಯ, ಗಣೇಶ್ ಕೆದಿಲಾಯ, ದೇವಳ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಕಾರ್ಯನಿರ್ವಗಣಾಽಕಾರಿ ಕೆವಿ ಶ್ರೀನಿವಾಸ್, ಹರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ದೈವಸೂಚನೆಯಂತೆ ಕೆಲಸ
ದೇವಸ್ಥಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ದೇವಸ್ಥಾನದ ಆಸುಪಾಸಿನಲ್ಲಿ ದೈವಸೂಚನೆಯಂತೆ ಕೆಲಸ ನಡೆಯುತ್ತಿದೆ. ಮೂಲವ್ಯವಸ್ಥೆಗೆ, ದುರ್ಗೆಗೆ ಹೆಚ್ಚು ಮಹತ್ವ ನೀಡಬೇಕಾಗಿದ್ದು, ಪೂರ್ವದಲ್ಲಿ ಸಂಬಂಧವಿದ್ದ ವೈಷ್ಣವ ಸಾನ್ನಿಧ್ಯದ ಕೋಪ ಇರುವಂತೆ ಕಾಣಿಸುತ್ತಿದೆ. ವೈಷ್ಣವ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಸಹಕಾರವನ್ನು ದೇವಳದಿಂದ ನೀಡಬೇಕು. ದೇವರಿಗೆ ಬಿಡಬೇಕೆಂಬುದು ಮೊದಲಿನಿಂದಲೇ ಇದೆ. ಜಾಗವನ್ನು ದೇವರಿಗೆ ಉಚಿತವಾಗಿ ಬಿಟ್ಟು ಕೊಡಬೇಕಾಗಿತ್ತು. ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನೇ ಮಾಡಲಾಗುತ್ತಿದೆ. ಸಂಪತ್ತನ್ನು ಬೇರೆಯವರಿಗೆ ನೀಡುವುದಕ್ಕೆ ದೇವರ ಒಪ್ಪಿಗೆಯಿಲ್ಲ. ಆ ಮೊತ್ತವನ್ನು ಬೇರೆ ಅಭಿವೃದ್ಧಿಗೆ ಬಳಸಬಹಸಬಹುದಿತ್ತು.

ವಾಸಕ್ಕೆ ಯೋಗ್ಯವಲ್ಲ!
ದೇವಸ್ಥಾನದ ಪರಿಸರ ಮನುಷ್ಯ ವಾಸಕ್ಕೆ ಯೋಗ್ಯ ಪ್ರದೇಶವಲ್ಲ. ಆ ಸ್ಥಳ ದೇವಸ್ಥಾನದ ಉತ್ಸವಗಳಿಗೆ ಬಳಕೆಯಾಗಬೇಕಾಗಿದೆ. ದೇವಸ್ಥಾನದ ಪರಿಸರದಲ್ಲಿ ಮಾಡುವ ಕೆಲವು ಕಾರ್ಯಗಳಿಂದ ಅಶುದ್ಧವಾಗಿದೆ. ಜಾಗವನ್ನು ಬಿಡದವರಿಗೆ ಬೇರೆ ಅನಿಷ್ಟವಿದೆ. ದೇವರ ಸಪ್ತ ಪ್ರಕಾರವನ್ನು ಸಂರಕ್ಷಿಸುವ ಅಗತ್ಯವಿದೆ. ದೇವಸ್ಥಾನಕ್ಕೆ ಸಂಬಂಽಸಿದ ವ್ಯವಸ್ಥೆಯನ್ನು ದೇವಸ್ಥಾನಕ್ಕೇ ಹಿಂದಿರುಗಿಸುವುದು ಉತ್ತಮ. ದೇವಸ್ಥಾನದಲ್ಲಿ ಕೆಲಸ ನಿರ್ವಹಿಸಿದ್ದಕ್ಕೆ ನೀಡಲ್ಪಟ್ಟ ಜಾಗದವರು ಪ್ರಾಮಾಣಿಕವಾಗಿ ಸೇವೆಯನ್ನು ಮಾಡಿದ್ದಾರಾ ಎಂಬುದು ಮುಖ್ಯ. ಈಗ ಪಡೆದದ್ದು ಸ್ವಲ್ಪ ಜಾಗ ಮಾತ್ರವಾಗಿದ್ದು, ಬೇರೆ ಜಾಗವನ್ನು ದೇವಸ್ಥಾನಕ್ಕೆ ಪಡೆಯುವ ಕಾರ್ಯವಾಗಬೇಕು. ಎಲ್ಲ ಜಾಗ ಮಹಾಲಿಂಗೇಶ್ವರನ ಹೆಸರಿಗೆ ಸಮರ್ಪಣೆಯಾಗಬೇಕು.

ವಿಶೇಷ ವ್ಯವಸ್ಥೆ ಅಗತ್ಯ
ಉಳ್ಳಾಳ್ತಿ, ರಕ್ತೇಶ್ವರಿ ಸಹಿತ ಗುಳಿಗನಿಗೆ ವಿಶೇಷ ವ್ಯವಸ್ಥೆಯಿದೆ. ಸರ್ಪ ಬಾಧೆಗೆ ಅಗತ್ಯ ಕ್ರಮ ಹಾಗೂ ಮೃತ್ಯುಂಜಯ ಶಾಂತಿ ಕೈಗೊಳಬೇಕು. ಗೋಹತ್ಯೆ, ಸ್ತ್ರೀ ಸಂಬಂಧ ದೋಷಗಳಿಗೆ ಪರಿವಾರ ಅಗತ್ಯವಿದೆ. ದೇವಸ್ಥಾನದ ಸುತ್ತ ಇರುವ ಎರಡು ಅಶ್ವತ್ಥ ಕಟ್ಟೆ ಹಾಗೂ ಉಳಿದ ಆರು ಕಟ್ಟೆಗಳನ್ನು ಉಳಿಸಿಕೊಳ್ಳುವುದು ಉತ್ತಮ.

 

Share This Article

ಬೆಣ್ಣೆಯಂತೆ ಕೊಬ್ಬು ಕರಗಬೇಕೆ; ಉತ್ತಮ ಫಲಿತಾಂಶಕ್ಕಾಗಿ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ | Health Tips

ಕೆಲವರು ಹೊರಗೆ ಊಟ ಮಾಡಿದ ನಂತರವೂ ತೆಳ್ಳಗಿರುತ್ತಾರೆ. ಯಾವುದೇ ಜಿಮ್ ಅಥವಾ ವ್ಯಾಯಾಮವನ್ನೂ ಮಾಡುವುದಿಲ್ಲ. ಏಕೆಂದರೆ…

ಶೀತ & ಜ್ವರವಿದ್ದಾಗ ಹುಳಿ ಮೊಸರು ಸೇವಿಸಬಹುದೇ?; ಇಲ್ಲಿದೆ ಉಪಯುಕ್ತ ಮಾಹಿತಿ | Health Tips

ಶೀತ ಮತ್ತು ಜ್ವರದ ಚಿಕಿತ್ಸೆಯ ಜತೆಗೆ ಹಲವು ರೀತಿಯ ಮುನ್ನೆಚ್ಚರಿಕೆಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಮೊಸರು ಸೇವಿಸದಿರುವುದು…

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…