ಪುತ್ತೂರು: ಜಿಲ್ಲೆಯಲ್ಲಿ ಹಾಡಹಗಲೇ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳ್ಳರಿಗೆ ಪೊಲೀಸರ ಭಯ ಇದ್ದಂತೆ ಕಾಣುವುದಿಲ್ಲ. ಜಿಲ್ಲೆಯಲ್ಲಿ ಪೊಲೀಸರು ಇದ್ದಾರೋ, ಇಲ್ಲವೋ? ಎಂಬ ಸಂಶಯ ಜನಸಾಮಾನ್ಯರನ್ನು ಕಾಡುವಂತಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಡಿಲಗೊಂಡಿದೆ. ಅಪರಾಽಗಳಿಗೆ ಕಾನೂನಿನಡಿ ಶಿಕ್ಷೆ ಆಗದಿರುವುದು ದುರದೃಷ್ಟ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ನಡೆದಿದೆ. ಕೆಲ ಕಡೆಗಳಲ್ಲಿ ಮನೆಯಿಂದಲೂ ಕಳ್ಳರು ಹಣ ಒಡವೆ ದೋಚಿದ್ದಾರೆ. ಈ ಅಪರಾಧ ಕೃತ್ಯದಲ್ಲಿ ತೊಡಗಿದವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿಲ್ಲ. ಹೊಡೆದರೆ, ಶೂಟೌಟ್ ಮಾಡಿದರೆ ಮಾನವ ಹಕ್ಕು ಆಯೋಗ ಬರುವ ಕಾರಣ, ಕಳ್ಳರು ಬಚಾವಾಗುತ್ತಿದ್ದಾರೆ. ಕಾನೂನಿನ ಹಂತ ಮೀರಿ ಪೊಲೀಸರು ಕ್ರಮಕ್ಕೆ ಮುಂದಾಗಬೇಕಾದ ಸ್ಥಿತಿಯಿದೆ. ಬ್ಯಾಂಕ್ ದರೋಡೆ ಪ್ರಕರಣದಲ್ಲಿ ತೀವ್ರ ಕಾರ್ಯಾಚರಣೆ ಪೊಲೀಸರಿಂದ ಆಗುತ್ತಿದೆ. ಎರಡು ದಿನಗಳೊಳಗೆ ಅಪರಾಽಗಳನ್ನು ಬಂಽಸುವುದಾಗಿ ಪೊಲೀಸ್ ಅಽಕಾರಿಗಳು ಹೇಳಿದ್ದಾರೆಂದು ಅವರು ತಿಳಿಸಿದರು.