೯೮೬ ಪ್ರಕರಣಗಳ ರಾಜಿ ಸಂಧಾನ - ರಾಷ್ಟ್ರೀಯ ಲೋಕ ಅದಾಲತ್ - ೨.೧೩ ಕೋಟಿ ಪರಿಹಾರ ಮೊತ್ತ ವಿತರಣೆಗೆ ಆದೇಶ

PTR_12 JUL_5
Published on

ಪುತ್ತೂರು: ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಪುತ್ತೂರು ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಶನಿವಾರ ನಡೆಯಿತು. ೯೮೬ ಪ್ರಕರಣ ರಾಜಿ ಸಂಧಾನ ಮೂಲಕ ಇತ್ಯರ್ಥವಾಗಿ ೨.೧೩ ಕೋಟಿ ರೂ. ಪರಿಹಾರ ಮೊತ್ತ ವಿತರಣೆಗೆ ಆದೇಶಿಸಲಾಯಿತು.

ಪುತ್ತೂರು ನ್ಯಾಯಾಲಯದ ೬ ವಿಭಾಗದಲ್ಲಿ ಇದ್ದ ೬೯೬೭ ಪ್ರಕರಣಗಳಲ್ಲಿ ಅದಾಲತ್‌ನಲ್ಲಿ ೧೫೧೨ ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಪ್ರಯತ್ನಿಸಲಾಗಿತ್ತು. ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ೫೧ ಪ್ರಕರಣಗಳಲ್ಲಿ ೭ ಪ್ರಕರಣಗಳನ್ನು ಇತ್ಯರ್ಥಪಡಿಸಿ ೧೭,೬೦,೦೦೦ ರೂ.ಪರಿಹಾರ ವಿತರಣೆಗೆ ಆದೇಶಿಲಾಗಿದೆ. ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ಮತ್ತು ಎಸಿಜೆಎಂನ ೩೦೦ ಪ್ರಕರಣಗಳಲ್ಲಿ ೨೬೦ ಪ್ರಕರಣಗಳನ್ನು ಇತ್ಯರ್ಥಪಡಿಸಿ ೯೪,೮೩,೧೫೦ ರೂ., ಹೆಚ್ಚುವರಿ ವ್ಯವಹಾರಿಕ ನ್ಯಾಯಾಽಶರು ಹಾಗೂ ಜೆಎಂಎಫ್‌ಸಿಯ ೩೫೨ ಪ್ರಕರಣಗಳಲ್ಲಿ ೨೯೪ ಪ್ರಕರಣ ಇತ್ಯರ್ಥಪಡಿಸಿ ೧೩,೫೦೦ ರೂ., ಪ್ರಧಾನ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿನ ೩೯೩ ಪ್ರಕರಣಗಳಲ್ಲಿ ೪೨ ಪ್ರಕರಣ ಇತ್ಯರ್ಥಪಡಿಸಿ ೪೪,೫೫,೦೧೬ ರೂ., ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿಯ ೧೪೬ ಪ್ರಕರಣಗಳಲ್ಲಿ ೧೩೩ ಪ್ರಕರಣಗಳನ್ನು ಇತ್ಯರ್ಥಪಡಿಸಿ ೫೫,೬೮,೮೩೧ರೂ., ಎರಡನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ಮತ್ತು ಜೆಎಂಎಫ್‌ಸಿಯ ೨೭೦ ಪ್ರಕರಣಗಳಲ್ಲಿ ೨೫೦ ಪ್ರಕರಣಗಳನ್ನು ಇತ್ಯರ್ಥಪಡಿಸಿ ೨೪,೬೦೦ ರೂ. ಪರಿಹಾರ ವಿತರಣೆಗೆ ಆದೇಶಿಲಾಗಿದೆ.

ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಽಶೆ ಸರಿತಾ ಡಿ., ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ ನ್ಯಾಯಾಽಶೆ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಽಕಾರಿ ಪ್ರಕೃತಿ ಕಲ್ಯಾಣ್‌ಪುರ, ಹೆಚ್ಚುವರಿ ವ್ಯವಹಾರಿಕ ನ್ಯಾಯಾಽಶರು ಹಾಗೂ ಜೆಎಂಎಫ್‌ಸಿ ದೇವರಾಜ್ ವೈ.ಎಚ್., ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ವ್ಯವಹಾರಿಕ ನ್ಯಾಯಾಲಯದ ನ್ಯಾಯಾಽಶ ಶಿವಣ್ಣ ಎಚ್.ಆರ್., ಹೆಚ್ಚುವರಿ ವ್ಯವಹಾರಿಕ ನ್ಯಾಯಾಲಯ ನ್ಯಾಯಾಽಶ ಯೋಗೇಂದ್ರ ಶೆಟ್ಟಿಯವರ ನ್ಯಾಯಾಲಯದಲ್ಲಿ ಸಂಧಾನ ಪ್ರಕ್ರಿಯೆ ನಡೆಸಲಾಯಿತು. ಸಂಧಾನಕಾರ ವಕೀಲರಾಗಿ ಮಹಮ್ಮದ್ ರಿಯಾಝ್, ಮೋಹಿನಿ, ನಝೀರಾ, ಮಿಶ್ರಿಯಾ, ವಿಶಿಕಾ ಅವರನ್ನು ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net