

ಪುತ್ತೂರು: ಹರಿತ ಆಯುಧದಿಂದ ಹಿಂದು ಯುವಕ ಅನ್ಯಮತೀಯ ಯುವತಿ ಮೇಲೆ ದಾಳಿ ಮಾಡಿ, ಗಾಯಾಳುವನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲೇಜು ಹೋಗುವ ಸಂದರ್ಭದಲ್ಲಿ ಯುವ ಹಾಗೂ ಯುವತಿಯ ನಡುವೆ ಮಾತಿಗೆ ಮಾತು ಬೆಳೆದಿದ್ದು, ಇದೇ ವಿಚಾರದಲ್ಲಿ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಯುವತಿ ದಾಖಲಾದ ಆಸ್ಪತ್ರೆಯ ಮುಂಭಾಗದಲ್ಲಿ ಜನ ಜಮಾಯಿಸಿದ್ದಾರೆ.
ಕೆಲವು ಮೂಲಗಳ ಪ್ರಕಾರ ಯುವತಿಯೇ ಕೈಗೆ ಗಾಯ ಮಾಡಿಕೊಂಡಿದ್ದಾಳೆನ್ನಲಾಗಿದೆ. ಎಲ್ಲಾ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.