ಭಗವಂತನ ಸೇವೆಯಿಂದ ಜೀವನ ಸಾರ್ಥಕ : ಪುತ್ತಿಗೆ ಶ್ರೀ

IMG-20240118-WA0107
Published on

ಉಡುಪಿ : ಭಗವಂತನ ಸೇವೆಯಿಂದ ಜೀವನ ಸಾರ್ಥಕ. ಮನುಷ್ಯನ ಆಯುಷ್ಯ 100 ವರ್ಷವಾದ್ದರಿಂದ ದೀರ್ ಸಂಬಂಧ ಸಾಧ್ಯವಿಲ್ಲ. ಭಗವಂತನ ಶಾಶ್ವತವಾಗಿದ್ದು, ಆತನ ಅನುಗ್ರಹದಿಂದ ಬೇಕಾದದ್ದನ್ನು ಪಡೆಯಲು ಸಾಧ್ಯವಿದೆ. ಕೃಷ್ಣ ಪೂಜೆ ವೈಯಕ್ತಿಕ ಪೂಜೆಯಲ್ಲ. ಜಗತ್ತಿನ ಕಲ್ಯಾಣಕ್ಕೋಸ್ಕರ ಅರ್ಪಣೆಯಾಗಿದೆ. ಲೋಕ ಕಲ್ಯಾಣ ಉದ್ದೇಶದಿಂದ ಮಧ್ವರು ಸಂಸಾರಬಂಧವಿಲ್ಲದ ಬಾಲಸಂನ್ಯಾಸಿಗಳನ್ನು ಪೂಜೆಗೆ ನಿಯುಕ್ತಿಗೊಳಿಸಿದ್ದಾರೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ರಾಜಾಂಗಣದಲ್ಲಿ ನಡೆದ ಪುತ್ತಿಗೆ ಮಠ ಪರ್ಯಾಯ ಉತ್ಸವ ದರ್ಬಾರ್ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಕೃಷ್ಣಪೂಜೆ ಜೀವನದ ದೊಡ್ಡ ಸುಯೋಗ
ಕೃಷ್ಣನ ಮೇಲೆ ಶ್ರದ್ಧೆ ಭಕ್ತಿ ಇದ್ದವರು ಮಾತ್ರ ಪರ್ಯಾಯದಲ್ಲಿ ಭಾಗವಹಿಸಲು ಸಾಧ್ಯ. ನಮ್ಮದು ಈ ಬಾರಿ ವಿಶ್ವಗಿತಾ ಪರ್ಯಾಯ. ಹೀಗಾಗಿ ದೇವರ ಇಚ್ಛೆಯಂತೆ ವಿಶ್ವಪ್ರಿಯ ತೀರ್ಥರು ಪೀಠದಲ್ಲಿ ಕುಳ್ಳಿರಿಸಿದ್ದಾರೆ. ಕೃಷ್ಣನ ಪೂಜೆ, ಸೇವೆ ಸುವರ್ಣ ಅವಕಾಶ. ಪ್ರಪಂಚದ ಕಾರ್ಯ ಬದಿಗಿಟ್ಟು, ದೇವರು ಕೊಟ್ಟ ಅವಕಾಶ ಬಿಡುವ ಮೂರ್ಖತನದ ಕೆಲಸ ಮಾಡುವುದಿಲ್ಲ. ಜೀವನದ ದೊಡ್ಡ ಸುಯೋಗ ಎಂದು ತಿಳಿಸಿದರು.  

ಪುತ್ತಿಗೆ ಪರ್ಯಾಯದಲ್ಲಿ ರಾಮಮಂದಿರ
ಭಾರತೀಯರ ಅನೇಕ ಶತಮಾನಗಳ ನನಸಾಗುತ್ತಿದ್ದು, ಅಯೋಧ್ಯೆಯಲ್ಲಿ ರಾಮದೇವರ ಪ್ರತಿಷ್ಠೆಯಾಗಿದ್ದು, ಪುತ್ತಿಗೆ ಪರ್ಯಾಯದಲ್ಲಿ ಎಂಬ ನೆನಪು ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ. ನಮಗಿದು ಹೆಮ್ಮೆಯ ವಿಚಾರ ಎಂದರು.

 ಚಿನ್ನದ ರಥ ನೀಡುವ ಸಂಕಲ್ಪ
ತಾವು ನಾಲ್ಕನೇ ಬಾರಿಗೆ ಪರ್ಯಾಯ ಅಲಂಕರಿಸುತ್ತಿದ್ದು, ಸನ್ಯಾಸ ಆಶ್ರಮ ಪೂರೈಸಿ 50 ವರ್ಷ ಸಂದಿರುವ ಹಿನ್ನೆಲೆಯಲ್ಲಿ  ಕೃಷ್ಣನಿಗೆ ಚಿನ್ನದ ರಥ ಸಮರ್ಪಿಸುವ ಸಂಕಲ್ಪ ಹೊಂದಿದ್ದೇನೆ. ವಿದೇಶ ಪ್ರವಾಸ ಕ್ಕಿಂತ ಕೃಷ್ಣಪೂಜೆಯೇ ಮುಖ್ಯವಾಗಿದ್ದು, ಈ ಎರಡು ವರ್ಷಗಳ ಪರ್ಯಾಯದ ಅವಧಿಯಲ್ಲಿ ಗೀತೆಗೆ ಸಂಬಂಧಪಟ್ಟ ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ಪುತ್ತಿಗೆ ಪರ್ಯಾಯ ವಿಶ್ವ ಗೀತ ಪರ್ಯಾಯವಾಗಿರಲಿದೆ ಎಂದು ಶ್ರೀಗಳು ಹೇಳಿದರು.

ಪರ್ಯಾಯ ಸ್ವಾಗತ ಸಮಿತಿ ಗೌರವಾಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ವಿದೇಶದಲ್ಲಿ ಧರ್ಮಪ್ರಸಾರ ಸುಲಭದ ಕೆಲಸವಲ್ಲ. ಆದರೆ ಪುತ್ತಿಗೆ ಶ್ರೀಗಳು ವಿದೇಶಿಗರನ್ನು ಪಶ್ಚಿಮದಿಂದ ಪೂರ್ವಕ್ಕೆ ತಿರುಗಿಸಿದ್ದಾರೆ. ಈ ಮೂಲಕ ಭಾರತೀಯತೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ. ಪಾಶ್ಚಾತ್ಯರು ಭಾರತದ ಕಡೆಗೆ ನೋಡಲು ಇಲ್ಲಿನ ಆಧ್ಯಾತ್ಮಿಕ ಸಂಪತ್ತು. ಮುಖ್ಯ ಕಾರಣವಾಗಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಮಾತನಾಡಿದರು.

ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.  ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಕೃಷಿ ಇಲಾಖೆ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಸ್ಪೀಕರ್ ಯು.ಟಿ. ಖಾದರ್, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕಿರಣ್ ಕುಮಾರ್ ಕೊಡ್ಗಿ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಪಾನ್ ರಿಶ್ಯೋ ಕೋಸಿ ಕ್ಯಾಯ ಅಧ್ಯೆ ಕೋಶೋ ನಿವಾನೋ,  ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಭೋಜೇ ಗೌಡ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಭಾಗವಹಿಸಿದ್ದರು.

ದರ್ಬಾರ್ ಸನ್ಮಾನ
ಹಿರಿಯ ವಿದ್ವಾಂಸರಾದ ಸಗ್ರಿ ರಾವೇಂದ್ರ ಉಪಾಧ್ಯಾಯ, ಕೇಶವ ರಾವ್ ತಾಡಪತ್ರಿ, ಡಾ.ಎನ್. ವೆಂಕಟೇಶಾಚಾರ್ಯ,  ಜ್ಯೋತಿಷಿ ಬೇಳ ಪದ್ಮನಾಭ ಶರ್ಮ,  ನವದೆಹಲಿ ಕೇಂದ್ರಿಯ ಸಂಸತ ವಿವಿ ಕುಲಪತಿ ಡಾ. ಶ್ರೀನಿವಾಸ ವರಖೇಡಿ, ಹಿರಿಯ ಸಂಶೋಧಕ ರಾಮನಾಥ ಅಚಾರ್ಯ, ಬೆಂಗಳೂರು ಇಸ್ಕಾನ್ ಅಧ್ಯಕ್ಷ ಮಧುಪಂಡಿತ್ ದಾಸ್, ಅಂತರಾಷ್ಟ್ರೀಯ ಇಸ್ಕಾನ್ ಅಧ್ಯಕ್ಷ ರೇವತಿರಮಣ ದಾಸ್, ಮಾಹೆ ಅಧ್ಯಕ್ಷ ಡಾ.ರಂಜನ್ ಪೈ, ಹಿರಿಯ ವಕೀಲ ಅಶೋಕ್ ಹಾರ್ನಹಳ್ಳಿ, ಅಮೇರಿಕಾದ ಕೋಕಿಲ ವೇಮುರಿ, ಮಹಾಂತೇಶ್ ಸಣ್ಣನವರ್ ಅವರಿಗೆ ದರ್ಬಾರ್ ಸನ್ಮಾನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net