ಗದಗ: ಜಿಲ್ಲೆಯಾದ್ಯಂತ ಪುಟ್ಟರಾಜ ಕವಿ ಗವಾಯಿಗಳ 109ನೇ ಜಯಂತ್ಯೋತ್ಸವ

03GDG10A
Published on

ಗದಗ:

ಜಿಲ್ಲೆಯಾದ್ಯಂತ ಶುಕ್ರವಾರ ಪಂ.ಪುಟ್ಟರಾಜ ಗವಾಯಿಗಳ 109ನೇ ಜಯಂತ್ಯೋತ್ಸವ ಸಂಭ್ರಮದಿಂದ ಆಚರಿಸಲಾಯಿತು. ಶಿಕ್ಷಣ ಸಂಸ್ಥೆಗಳು, ಸಂಟನೆಗಳು, ಏಪಿಎಂಸಿ ವರ್ತಕರು, ಕಾಮಿರ್ಕ ಸಂಟನೆಗಳು, ಅಯ್ಯಪ್ಪ ಸ್ವಾಮೀ ಭಕ್ತರು ವಿವಿಧ ವೃತ್ತಗಳಲ್ಲಿ, ಕಚೇರಿಗಳಲ್ಲಿ, ದೇವಸ್ಥಾನಗಳಲ್ಲಿ ಪುಷ್ಪಾರ್ಚನೆ, ರಾಭಿಷೇಕದಿಂದ ಪೂಜ್ಯ ಶ್ರೀಗಳಿಗೆ ನಮನ ಸಲ್ಲಿಸಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿವಿಧ ಧಾಮಿರ್ಕ ಕಾರ್ಯಕ್ರಮ ಬೆಳ್ಳಗೆಯಿಂದ ಜರುಗಿದರು.ಎಲ್ಲೆಡೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಆರಾಧಿಸಲಾಯಿತು. ಪುಣ್ಯಾಶ್ರಮದಲ್ಲಿರುವ ಹಾನಗಲ್​ ಕುಮಾರಸ್ವಾಮಿ ಗದ್ದುಗೆ, ಪಂ.ಪಂಚಾರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳ ಕತೃಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ನಾನಾ ಭಾಗದಿಂದ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು.

ಅಂಧರ ಬೆಳಕಿನ ಆಶಾಕಿರಣ, ಅನಾಥರಿಗೆ ದಾರಿ ದೀಪ ಗಾನಗಂಧರ್ವ ಲಿಂ.ಪಂ.ಪುಟ್ಟರಾಜ ಕವಿ ಗವಾಯಿಗಳ 109ನೇ ಜಯಂತೋತ್ಸವ ಅಂಗವಾಗಿ 1009 ಪೂರ್ಣ ಕುಂಭದೊಂದಿಗೆ ಪಂ.ಪುಟ್ಟರಾಜಕವಿ ಗವಾಯಿಗಳ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವೀರೇಶ್ವರ ಪುಣ್ಯಾಶ್ರಮದಿಂದ ಆರಂಭಗೊಂಡ ಬೃಹತ್​ ಕುಂಭ ಮೇಳ ಮೆರವಣಿಗೆ ಭೂಮರೆಡ್ಡಿ ವೃತ್ತ, ಕೆ.ಎಚ್​.ಪಾಟೀಲ್​ ಸರ್ಕಲ್​, ಹತ್ತಿಕಾಳ ಕೂಟ, ಟಾಂಗಾಕೂಟ್​, ಗಾಂಧಿ ಸರ್ಕಲ್​, ಕೆ.ಸಿ.ರಾಣಿ ರಸ್ತೆ ಮಾರ್ಗವಾಗಿ ಪುನಃ ಪುಣ್ಯಾಶ್ರಮ ತಲುಪಿತು. ಸಾವಿರಾರು ಮಹಿಳೆಯರು ಹಾಗೂ ವಿದ್ಯಾಥಿರ್ಗಳು ನಗರದ ಪ್ರಮುಖ ಮಾರ್ಗಗಳಲ್ಲಿ ವಾದ್ಯಮೇಳ, ಪೂರ್ಣಕುಂಭದೊಂದಿಗೆ ಗವಾಯಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಸಾವಿರಾರು ಸುಮಂಗಲೆಯರು ಪೂರ್ಣಕುಂಭ ಕಳಶ ಹೊತ್ತು ಪಾಲ್ಗೊಂಡು, ಮೆರುಗು ತಂದರು.

ಸ್ಮರಣೆ:

ನಗರದ ಭೂಮ್ಮರಡ್ಡಿ ಸರ್ಕಲ್​ನಲ್ಲಿರುವ ಪುಟ್ಟರಾಜರ ಮೂತಿರ್ಗೆ ಭಕ್ತರು ಪೂಜೆ ಸಲ್ಲಿಸಿದರು. ಇನ್ನೂ ನಗರದ ಮಾರ್ಗಗಳಲ್ಲಿ ಪುಟ್ಟರಾಜ ಗವಾಯಿಗಳ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು. ಅವರನ್ನು ಸ್ಮರಿಸುವ ಜತೆಗೆ ಎಲ್ಲೆಡೆಯೂ ಅನ್ನಪ್ರಸಾದ ಹಮ್ಮಿಕೊಳ್ಳಲಾಗಿತ್ತು. ದಾರಿಹೋಕರಿಗೆ ಪ್ರಸಾದದೊಂದಿಗೆ ತಂಪು ಪಾನೀಯ ವಿತರಿಸಲಾಯಿತು. ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ, ಜೈ ಕರ್ನಾಟಕ ಸಂಟನೆ ಸೇರಿದಂತೆ ವಿವಿಧ ಸಂಟನೆಯಿಂದ ಪೂಜೆಗಳು ಜರುಗಿದವು ನಡೆಯಿತು.

ಜಯಂತ್ಯೋತ್ಸವದ ಅಂಗವಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿರುವ ಶ್ರೀಗಳ ಗದ್ದುಗೆಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲೂ ನೂರಾರು ಭಕ್ತರು ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಗದ್ದುಗೆಗಳ ದರ್ಶನ ಆಶೀರ್ವಾದ ಪಡೆದರು. ಜತೆಗೆ ಹಲವಾರು ಅಂಧ ಅನಾತ ಮಕ್ಕಳು ಸಹ ಜಯಂತ್ಯೋತ್ಸವ ಅಂಗವಾಗಿ ಮಠಕ್ಕೆ ಆಗಮಿಸುತ್ತಿದ್ದಾರೆ.

ಸಾಮೂಹಿಕ ವಿವಾಹ, ಅನ್ನಸಂತರ್ಪಣೆ:

ಜಯಂತ್ಯೋತ್ಸವದ ಅಂಗವಾಗಿ ಸರ್ವಧರ್ಮದಿಂದ 30 ಜೋಡಿಗಳ ಸಾಮೂಹಿಕ ವಿವಾಹ ನಡೆಯಿತು. ವೀರೇಶ್ವರ ಪುಣ್ಯಾಶ್ರಮದ ಪೀಠಾಪತಿ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ನಾಡಿನ ವಿವಿಧ ಭಾಗದಿಂದ ಆಗಮಿಸಿದ್ದ ಭಕ್ತರಿಗೆ ಹಾಗೂ 30 ಜೋಡಿ ಮದುವೆಗೆ ಬಂದಿರುವ ಭಕ್ತರಿಗೆ ಎಪಿಎಂಸಿ ಆವಣರದಲ್ಲಿರುವ ಕೆ.ಎಚ್​.ಪಾಟೀಲ ಸಭಾಭವನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಟ್ರಾಫಿಕ್​ ಜಾಮ್​

ನಗರದ ಹೃದಯ ಭಾಗದಲ್ಲಿರುವ ವೀರೇಶ್ವರ ಪುಣ್ಯಾಶ್ರಮ ಆವರಣ ಹಾಗೂ ಎಪಿಎಂಸಿ ಆವರಣದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಬಂದಿರುವ ಹಿನ್ನಲೆಯಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು. ಬೈಕ್​, ಕಾರ್​, ಟ್ರಾ$್ಯಕ್ಟರ್​ ಸೇರಿದಂತೆ ವಿವಿಧ ವಾಹನಗಳಿಂದ ಸಾಯಂಕಾಲದವರಿಗೆ ಟ್ರಾಫಿಕ್​ ಕಿರಿಕಿರಿ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net