ಫಹದ್ ಫಾಸಿಲ್ ಜನ್ಮದಿನಕ್ಕೆ ರಿಲೀಸ್ ಆಯ್ತು ಅವರ ಫಸ್ಟ್​ ಲುಕ್; ಶುಭಾಶಯ ತಿಳಿಸಿದ 'ಪುಷ್ಪಾ 2' ಚಿತ್ರತಂಡ​

Untitled design - 2023-08-08T173619.611
Published on

ಆಂಧ್ರಪ್ರದೇಶ: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪಾ 2' ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಸಾಕಷ್ಟು ಕುತೂಹಲ ಮೂಡುತ್ತಿದ್ದು, ಇದೀಗ ಚಿತ್ರತಂಡ ಸಿನಿಮಾದ ಪ್ರಮುಖ ಪಾತ್ರಧಾರಿ ಫಹದ್ ಫಾಸಿಲ್ ಅವರ 41ನೇ ಜನ್ಮದಿನಕ್ಕೆ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಇಂದು  ಅನಾವರಣಗೊಳಿಸಿದೆ.

'ಪುಷ್ಪಾ 2' ಚಿತ್ರದಲ್ಲಿ ಖಡಕ್​ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಮಿಂಚಲು ಸಜ್ಜಾಗಿರುವ ಫಹದ್​ ಫಾಸಿಲ್​ ಅವರ 41ನೇ ಹುಟ್ಟುಹಬ್ಬಕ್ಕೆ ಇಂದು ಚಿತ್ರತಂಡ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಗೊಳಿಸುವ ಮುಖೇನ ಜನ್ಮದಿನದ ಶುಭಾಶಯಗಳನ್ನು ತಿಳಿಸಿದೆ. ಟಾಲಿವುಡ್​​ನ ಹೆಸರಾಂತ ನಿರ್ದೇಶಕ ಸುಕುಮಾರ್ ನಿರ್ದೇಶನದ ಬ್ಲಾಕ್‌ಬಸ್ಟರ್ ಹಿಟ್​ ಪುಷ್ಪಾ 1ರ ಮುಂದುವರಿದ ಭಾಗವಾಗಿರುವ ಪುಷ್ಪಾ 2 ಚಿತ್ರದ ಮೇಲೆ ಸಿನಿಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದ್ದು, ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರೆ, ಅನಸೂಯಾ ಭಾರದ್ವಾಜ್, ಸುನೀಲ್, ಜಗದೀಶ್, ಫಹದ್​ ಫಾಸಿಲ್ ಸೇರಿದಂತೆ ದೊಡ್ಡ ತಾರಾಗಣವಿದೆ. ಪುಷ್ಪ 2 ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net