

ಬಂಟ್ವಾಳ: ಮನುಷ್ಯನ ಮನಸ್ಸು ಕಲುಷಿತಗೊಂಡಿದ್ದು, ಮನಸ್ಸು ಶುದ್ಧೀಕರಣವಾದಾಗ ಸಮಾಜ ಶುದ್ಧೀಕರಣವಾಗುತ್ತದೆ. ಮನುಷ್ಯರ ನಡುವೆ ಅವಿಶ್ವಾಸವಿರುವ ಈ ಕಾಲಘಟ್ಟದಲ್ಲಿ ಸೌಹಾರ್ದತೆಗಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಶನಿವಾರ ಸಂಜೆ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
ಅಲ್ಲಿಪಾದೆ ಸಂತ ಅಂಥೋನಿ ಚರ್ಚ್ ಧರ್ಮ ಗುರು ರಾಬರ್ಟ್ ಡಿಸೋಜ ಮಾತನಾಡಿ, ಸತ್ಯದ ಕೊರತೆಯ ಇಂದಿನ ಸಮಾಜದಲ್ಲಿ ಇಫ್ತಾರ್ ಎಲ್ಲರನ್ನೂ ಒಂದು ಮಾಡಬೇಕಿದೆ ಎಂದರು.
ಯುನಿಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರಾಜೀವ ಗಾಂಧಿ ಆರೋಗ್ಯ ವಿವಿ ಸೆನೆಟ್ ಸದಸ್ಯ ಡಾ.ಯು.ಟಿ.ಇಫ್ತೀಕರ್, ಕುದ್ರೋಳಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್.ಪೂಜಾರಿ, ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಜ್, ಪ್ರಮುಖರಾದ ಪಿಯೂಸ್ ಎಲ್.ರಾಡ್ರಿಗಸ್, ಬಿ.ಪದ್ಮಶೇಖರ್ ಜೈನ್, ಮುನೀರ್ ಕಾಟಿಪಳ್ಳ, ಡಾ.ರಘು, ಸುದೀಪ್ ಶೆಟ್ಟಿ ಮಾಣಿ, ಧರಣೇಂದ್ರಕುಮಾರ್, ಎಂ.ಶಶಿಧರ್ ಹೆಗ್ಡೆ, ನವೀನ್ ಡಿಸೋಜ, ಅಶೋಕ್ ಕೋಡಿಕಲ್, ಆರ್.ಕೆ.ಪೃಥ್ವಿರಾಜ್, ಅಪ್ಪಿ, ಜೋಕಿಂ ಡಿಸೋಜ, ಚಂದ್ರಶೇಖರ ಭಂಡಾರಿ ಅಮ್ಮುಂಜೆ, ಬಿ.ಆರ್.ಅಂಚನ್, ಶಬೀರ್ ಸಿದ್ದಕಟ್ಟೆ, ಶೈಲಜಾ ರಾಜೇಶ್, ಜೋಸ್ಮಿನ್ ಡಿಸೋಜ, ಪದ್ಮನಾಭ ರೈ, ಅಬ್ಬಾಸ್ ಆಲಿ ಮೊದಲಾದವರಿದ್ದರು. ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ವಾಗತಿಸಿದರು. ಬೂಡಾ ಅಧ್ಯಕ್ಷ ಬೇಬಿ ಕುಂದರ್ ವಂದಿಸಿದರು.