ಪುನೀತ್​ ಹೊಸ ಚಿತ್ರ 'ದ್ವಿತ್ವ' ... ಹೊಂಬಾಳೆ ಫಿಲಂಸ್​ನಿಂದ ಅಧಿಕೃತ ಘೋಷಣೆ

Dvitva - Final
Published on

ಬೆಂಗಳೂರು: ಪುನೀತ್ ರಾಜಕುಮಾರ್ ಮತ್ತು ‘ಲೂಸಿಯಾ’ ಪವನ್ ಕುಮಾರ್ ಕಾಂಬಿನೇಷನ್ ಸಿನಿಮಾದ ಹೆಸರು ಇಂದು ಬೆಳಿಗ್ಗೆ ಘೋಷಿಸಲಾಗುತ್ತದೆ ಎಂದು ಹೊಂಬಾಳೆ ಫಿಲಂಸ್​ ಘೋಷಿಸಿತ್ತು. ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಚಿತ್ರದ ಹೆಸರು ಏನಿರಬಹುದು? ಇದ್ಯಾವ ತರಹದ ಚಿತ್ರ? ಎಂಬ ಕುತೂಹಳ ಪುನೀತ್​ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಅದಕ್ಕೆ ಉತ್ತರ ಕೊನೆಗೂ ಸಿಕ್ಕಿದ್ದು, ಚಿತ್ರಕ್ಕೆ 'ದ್ವಿತ್ವ' ಎಂದು ಹೆಸರಿಡಲಾಗಿದೆ.

ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ಸಿದ್ಧವಾಗಲಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ನಾಳೆ ಇಂದು ಬೆಳಗ್ಗೆ 11.46ಕ್ಕೆ ಸೋಷಿಯಲ್​ ಮೀಡಿಯಾ ಮೂಲಕ ಆಗಿದೆ. ಅದರಂತೆ ಟೈಟಲ್​ ಘೋಷಣೆಯಾಗಿದ್ದು, 'ದ್ವಿತ್ವ' ಚಿತ್ರದ ಟೈಟಲ್​ ಪೋಸ್ಟರ್​ ಬಿಡುಗಡೆಯಾಗಿದೆ. ಇದೊಂದು ಸೈಕಲಾಜಿಕಲ್​ ಥ್ರಿಲ್ಲರ್​ ಆಗಿದ್ದು, ಸೆಪ್ಟೆಂಬರ್​ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

'ದ್ವಿತ್ವ' ಚಿತ್ರಕ್ಕೆ ಪ್ರೀತಾ ಛಾಯಾಗ್ರಹಣ ಮಾಡಿದರೆ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಉಳಿದ ತಾರಾಬಳಗ ಮತ್ತು ತಂತ್ರಜ್ಱರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಇದು ಹೊಂಬಾಳೆ ಫಿಲಂಸ್​ನ ವಿಜಯ್​ಕುಮಾರ್​ ಕಿರಗಂದೂರು ಮತ್ತು ಪುನೀತ್​ ರಾಜಕುಮಾರ್​ ಕಾಂಬಿನೇಷನ್​ನ ನಾಲ್ಕನೇ ಚಿತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net