ಪುನೀತ್ ಚಿತ್ರಗಳು ಓಟಿಟಿಗೆ; ಅಮೆಜಾನ್​ನಲ್ಲಿ ಫ್ರೆಂಚ್ ಬಿರಿಯಾನಿ ಮತ್ತು ಲಾ

page 10 2
Published on

ಬೆಂಗಳೂರು: ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಮುನ್ನವೇ ಓಟಿಟಿಯಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಈಗಾಗಲೇ ಕನ್ನಡದಲ್ಲಾಗಿದೆ. ಆದರ್ಶ್ ಈಶ್ವರಪ್ಪ ನಿರ್ದೇಶನದ ‘ಭಿನ್ನ’ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಮುನ್ನ, ಜೀ 5ನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಪುನೀತ್ ನಿರ್ವಣದ ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಚಿತ್ರಗಳು ಸಹ ನೇರವಾಗಿ ಓಟಿಟಿಯಲ್ಲೇ ಬಿಡುಗಡೆಯಾಗುತ್ತಿವೆ.

ಹೌದು, ‘ಲಾ’ ಮತ್ತು ‘ಫ್ರೆಂಚ್ ಬಿರಿಯಾನಿ’ ಚಿತ್ರಗಳು ಕ್ರಮವಾಗಿ ಜೂನ್ 26 ಮತ್ತು ಜುಲೈ 24ರಂದು ವರ್ಲ್ಡ್ ಪ್ರೀಮಿಯರ್ ಆಗಲಿವೆ. ಈ ಕುರಿತು ಪಿಆರ್​ಕೆ ಪ್ರೊಡಕ್ಷನ್ಸ್​ನ ಟ್ವಿಟರ್ ಅಕೌಂಟ್​ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.

ತಮ್ಮ ನಿರ್ವಣದ ಎರಡು ಚಿತ್ರಗಳು ಅಮೆಜಾನ್​ನಲ್ಲಿ ಬಿಡುಗಡೆಯಾಗುತ್ತಿರುವ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ಪುನೀತ್ ರಾಜಕುಮಾರ್, ‘ಪ್ರಮುಖವಾಗಿ ಸಂದರ್ಭವೇ ಹಾಗಿದೆ. ಇಡೀ ಜಗತ್ತು ಕೋವಿಡ್ ವಿರುದ್ಧ ಹೋರಾಡುತ್ತಿದೆ. ಹೀಗಿರುವಾಗ ಈಗಲೇ ಪ್ರದರ್ಶನ ಶುರು ಮಾಡುವುದು ಕಷ್ಟ. ನಮ್ಮ ಸಂಸ್ಥೆ ನಿರ್ವಿುಸಿರುವ ಈ ಎರಡು ಸಿನಿಮಾಗಳು ತಯಾರಾಗಿದ್ದವು. ಹಾಗಾಗಿ ಓಟಿಟಿ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ಇದೇನು ಹೊಸದಲ್ಲ. ಈ ಹಿಂದೆಯೂ ಕೆಲವು ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಹಾಗೆಯೇ, ಈ ತರಹದ ಬಿಡುಗಡೆ ಎಲ್ಲಾ ಸಿನಿಮಾಗಳಿಗೂ ಸಾಧ್ಯವಿಲ್ಲ. ಸೀಮಿತ ಬಜೆಟ್​ನ ಚಿತ್ರಗಳಿಗೆ ಮಾತ್ರ ಸಾಧ್ಯ. ಮಿಕ್ಕೆಲ್ಲವೂ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಬೇಕು. ಏಕೆಂದರೆ, ಚಿತ್ರಮಂದಿರಗಳೇ ನಮ್ಮ ಮುಖ್ಯವಾದ ಬಿಜಿನೆಸ್ಸು’ ಎನ್ನುತ್ತಾರೆ ಪುನಿತ್.

ಈ ಪೈಕಿ ‘ಲಾ’ ಚಿತ್ರವನ್ನು ರಘು ಸಮರ್ಥ್ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದೊಂದು ಕೋರ್ಟ್ ಡ್ರಾಮಾ ಆಗಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಈ ಹಿಂದೆ ‘ಹ್ಯಾಪಿ ನ್ಯೂ ಇಯರ್’ ಎಂಬ ಚಿತ್ರ ನಿರ್ದೇಶಿಸಿದ್ದ ಪನ್ನಗಾಭರಣ, ‘ಫ್ರೆಂಚ್ ಬಿರಿಯಾನಿ’ ಮೂಲಕ ವಾಪಸ್ಸಾಗಿದ್ದಾರೆ. ‘ನೊಗರಾಜ್’ ಖ್ಯಾತಿಯ ದಾನಿಶ್ ಸೇಠ್, ಈ ಚಿತ್ರದ ಹೀರೋ. ಸಾಲ್ ಯೂಸುಫ್, ರಂಗಾಯಣ ರಘು, ದಿಶಾ ಮದನ್ ಮುಂತಾದವರು ನಟಿಸಿದ್ದಾರೆ.

ಈ ತರಹದ ಬಿಡುಗಡೆ ಎಲ್ಲಾ ಸಿನಿಮಾಗಳಿಗೂ ಸಾಧ್ಯವಿಲ್ಲ. ಸೀಮಿತ ಬಜೆಟ್​ನ ಚಿತ್ರಗಳಿಗೆ ಮಾತ್ರ ಸಾಧ್ಯ. ಮಿಕ್ಕೆಲ್ಲವೂ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಬೇಕು. | ಪುನೀತ್ ರಾಜಕುಮಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net