ಪರಿಯಾಲ್ತಡ್ಕ ಶಾಲೆ ಕಟ್ಟಡಕ್ಕೆ ಶಿಲಾನ್ಯಾಸ - ೧೨೦ ವರ್ಷ ಕಂಡ ಶಿಕ್ಷಣ ಸಂಸ್ಥೆ - ೧ ಕೋ. ರೂ. ಯೋಜನೆ

PTR_4 SEP_5
Published on


ವಿಟ್ಲ: ನೂರಾ ಇಪ್ಪತ್ತು ವರ್ಷಗಳಷ್ಟು ದೀರ್ಘ ಇತಿಹಾಸ ಹೊಂದಿರುವ ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಬುಧವಾರ ಶಿಲಾನ್ಯಾಸ ನಡೆಯಿತು. ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ನೇತೃತ್ವದಲ್ಲಿ ಧಾರ್ಮಿಕ ವಿಽವಿಧಾನ ನೆರವೇರಿತು.


ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಸ್.ಮಹಮ್ಮದ್ ಮಾತನಾಡಿ, ೧೨೦ ವರ್ಷಗಳನ್ನು ಪೂರೈಸಿರುವ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ಸಹಸ್ರಾರು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಸರ್ವಧರ್ಮೀಯ ವಿದ್ಯಾಭಿಮಾನಿಗಳ ಸಹಕಾರದಿಂದ ಸುಮಾರು ೧ ಕೋಟಿ ವೆಚ್ಚದ ಕಟ್ಟಡ ಶೀಘ್ರವಾಗಿ ನಿರ್ಮಾಣವಾಗಬಹುದು. ಎಲ್ಲರೂ ಈ ಸೇವೆಗೆ ಕೈಜೋಡಿಸಬೇಕು ಎಂದರು.


ಪುಣಚ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಹಸೈನಾರ್ ಫೈಝಿ, ಪುಣಚ ಮನೇಲ ಕ್ರಿಸ್ತರಾಜ ಚರ್ಚ್‌ನ ಧರ್ಮಗುರು ಸ್ಟ್ಯಾನಿ ರೋಡ್ರಿಗಸ್, ಪುಣಚ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೇಬಿ ಪಟಿಕಲ್ಲು, ಶಾಲಾ ಆಡಳಿತ ಮಂಡಳಿ ಸಂಚಾಲಕಿ ಉಷಾಲಕ್ಷ್ಮೀ ಮಣಿಪಾಲ, ಮುಖ್ಯಶಿಕ್ಷಕ ರಾಮಚಂದ್ರ ರಾವ್, ಕಟ್ಟಡದ ಇಂಜಿನಿಯರ್ ರವಿ ಬಿ.ಕೆ, ನಿವೃತ್ತ ಮುಖ್ಯಶಿಕ್ಷಕ ಹರ್ಷ ಶಾಸ್ತ್ರಿ, ಊರಿನ ವಿವಿಧ ಸಂಘ ಸಂಸ್ಥೆಗಳ ಪದಾಽಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಹಳೇ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net