ವಿಟ್ಲ: ಕೋಟಿ-ಚೆನ್ನಯ ಬಿಲ್ಲವ ಸಂಘ ಪುಣಚ, ಬಿಲ್ಲವ ಮಹಿಳಾ ಸಮಿತಿ ಆಶ್ರಯದಲ್ಲಿ ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ಸಮುದಾಯದವರ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟವನ್ನು ಉದ್ಯಮಿ ಜನಾರ್ದನ ಪೂಜಾರಿ ಪಡುಮಲೆ ಉದ್ಘಾಟಿಸಿದರು. ನಾರಾಯಣ ಪೂಜಾರಿ ನೀರುಮಜಲು ಗರಡಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಪುಣಚ, ಕೇಪು, ಬಲ್ನಾಡು, ವಿಟ್ಲ ಮೂಡ್ನೂರು ಗ್ರಾಮದ ಸಮುದಾಯದವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.
ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಜೇನು ಕೃಷಿಕ ಸುಧಾಕರ ಪೂಜಾರಿ ಬಡೆಕೋಡಿ ಕೇಪು, ದೈಹಿಕ ಶಿಕ್ಷಣ ಶಿಕ್ಷಕಿ ಮೋಕ್ಷಾ, ಸಂಘದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು, ಪ್ರಧಾನ ಕಾರ್ಯದರ್ಶಿ ರವೀಂದ್ರ ಪೂಜಾರಿ ಇಸ್ಕೂಲು, ಮಹಿಳಾ ಸಮಿತಿ ಅಧ್ಯಕ್ಷೆ ನಳಿನಿ ಚಂದ್ರಶೇಖರ ದಲ್ಕಜೆಗುತ್ತು ಉಪಸ್ಥಿತರಿದ್ದರು. ರಿದ್ವಿತ ಕೆ ಪ್ರಾರ್ಥಿಸಿದರು. ರೇಖಾ ಅಶೋಕ್ ಸ್ವಾಗತಿಸಿದರು. ಭವ್ಯಾ ಮೋಹನ್ ವಂದಿಸಿದರು. ಶಿಕ್ಷಕಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.