ಪುದುವೆಟ್ಟು ಶಕ್ತಿ ಕೇಂದ್ರದ ಅಭ್ಯಾಸವರ್ಗ ಸಭೆ

New Project (26)
Published on

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪುದುವೆಟ್ಟು ಶಕ್ತಿ ಕೇಂದ್ರ ಪಂಚಾಯಿತಿ ಮಟ್ಟದ ಅಭ್ಯಾಸವರ್ಗ ಸಭೆ ನಡೆಯಿತು.

ಹಿರಿಯ ಕಾರ್ಯಕರ್ತ ದಿವಾಕರ ಗೌಡ ಮುಚ್ಚಾರು, ಪುಟ್ಟ ಗೌಡ ಬರಮೇಲು, ನಾರಾಯಣ ಪೂಜಾರಿ ಕಾಯರಂಡ ಕಾರ್ಯಕ್ರಮ ಉದ್ಘಾಟಿಸಿದರು. ಮಂಡಲ ಉಪಾಧ್ಯಕ್ಷ ಕೊರಗಪ್ಪ ಗೌಡ ಚಾರ್ಮಾಡಿ ಮಾತನಾಡಿದರು. ಶಾಸಕ ಹರೀಶ್ ಪೂಂಜ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ್ ಬೆಳಾಲು, ರಾಜೇಶ್ ಪೆರ್ಮುಡ, ಮಂಡಲ ಉಪಾಧ್ಯಕ್ಷ ಮೋಹನ್ ಅಂಡಿಂಜೆ, ಉಜಿರೆ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ ಬೈಠಕ್ ನೀಡಿದರು.

ಉಜಿರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಯಶವಂತ ಗೌಡ ಡೆಚ್ಚಾರು, ನಾರಾವಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಪುದುವೆಟ್ಟು ಪಂಚಾಯಿತಿ ಅಧ್ಯಕ್ಷ ಪೂರ್ಣಾಕ್ಷ, ಹಿರಿಯರಾದ ಶ್ರೀಧರ್ ನಾಯರ್, ಸಂಜೀವ ಗೌಡ ಅರಸೋಲಿಗೆ, ಅಣ್ಣು ಗೌಡ ಕೊಡಪೊಟ್ಯ, ಬೂತ್ ಅಧ್ಯಕ್ಷರಾದ ನಿತ್ಯಾನಂದ ಗೌಡ, ಸೋಯ್ ವರ್ಗಿಸ್, ಚಂದ್ರಹಾಸ, ಬೂತ್ ಕಾರ್ಯದರ್ಶಿಗಳಾದ ಗುರುಪ್ರಸಾದ್ ಕೋಟ್ಯಾನ್, ಆನಂದ ಕಲ್ಲಾಜೆ ಮೊದಲಾದವರಿದ್ದರು. ದಾಮೋದರ ಮುಜರ್ ದಡ್ದ್, ಭಾಸ್ಕರ ಪೂಜಾರಿ ಅಡ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net