ರಾಮಚಂದ್ರ ಅಮಳ ಪುಡಾ ಅಧ್ಯಕ್ಷ

PTR_13 MAR_8
Published on

ಪುತ್ತೂರು: ನಗರಾಭಿವೃದ್ಧಿ ಪ್ರಾಽಕಾರ (ಪುಡಾ) ಅಧ್ಯಕ್ಷರಾಗಿ ಕೆ. ರಾಮಚಂದ್ರ ಅಮಳ ಅವರನ್ನು ನೇಮಕ ಮಾಡಿ ಸರ್ಕಾರದ ಅಽನ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ. ಕಾಲೇಜು ಜೀವನದಲ್ಲಿ ಎನ್.ಎಸ್.ಯು.ಐ. ನಲ್ಲಿ ಸಕ್ರೀಯರಾಗಿದ್ದು, ಪುತ್ತೂರು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಶಕುಂತಲಾ ಟಿ. ಶೆಟ್ಟಿ ಬಿಜೆಪಿ ವಿರುದ್ದ ಬಂಡಾಯ ಎದ್ದ ಸಂದರ್ಭ ಸ್ವಾಭಿಮಾನಿ ವೇದಿಕೆಯನ್ನು ರೂಪಿಸಿದ ಅಗ್ರಗಣ್ಯ ನಾಯಕರಾಗಿ ಸ್ವಾಭಿಮಾನಿ ವೇದಿಕೆ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೨೦೧೩ರಲ್ಲಿ ಶಕುಂತಳಾ ಟಿ ಶೆಟ್ಟಿ ಜತೆ ಕಾಂಗ್ರೆಸ್ ಸೇರ್ಪಡೆಯಾಗಿ ಕೊಳ್ತಿಗೆ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೨೦೧೪ರಿಂದ ೨೦೨೪ರವರೆಗೆ ಸತತ ೩ ಅವಽಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರ ಅದಾಗಿ ಒಂದು ವರ್ಷದ ಬಳಿಕ ಕೆಪಿಸಿಸಿ ರಾಜ್ಯ ವಕ್ತಾರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net