ನಾಳೆ ಜನಸಂಪರ್ಕ ಸಭೆ, ಮನೆ ಹಸ್ತಾಂತರ

Published on

ಉಳ್ಳಾಲ: ನರಿಂಗಾನ ಗ್ರಾಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜನಸಂಪರ್ಕ ಸಭೆ, ಎಂಟು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮನೆ ಕೀಲಿ ಕೈ ಹಸ್ತಾಂತರ, ಶಾಲಾ ಕೊಠಡಿ ಸಹಿತ ವಿವಿಧ ಕಾಮಗಾರಿಗಳ ಉದ್ಘಾಟನಾ ಸವಾರಂಭ ನ.16ರಂದು ನಡೆಯಲಿದೆ ಎಂದು ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ನವಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ನೇತೃತ್ವದಲ್ಲಿ ಜನಸಂಪರ್ಕ ಸಭೆ ನರಿಂಗಾನ ಗ್ರಾ.ಪಂ. ಕಚೇರಿ ವಠಾರದಲ್ಲಿ ನಡೆಯಲಿದೆ. ಸಭೆಯಲ್ಲಿ ಉಳ್ಳಾಲ ಹಾಗೂ ಬಂಟ್ವಾಳ ತಾಲೂಕಿನ ಎಸ್‌ಸಿ, ಎಸ್‌ಟಿ ಕುಂದುಕೊರತೆ ವಿಚಾರಣೆ, ಹಕ್ಕುಪತ್ರ ವಿತರಣೆ, ಪಂಚಾಯಿತಿ ಕಚೇರಿ ಆವರಣದಲ್ಲಿ ಅಳವಡಿಸಿದ ಇಂಟರ್‌ಲಾಕ್, ಮುಖ್ಯದ್ವಾರ ಉದ್ಘಾಟನೆ, ಗುಡಿಸಲು ಮುಕ್ತ ಗ್ರಾಮ ಯೋಜನೆಯಡಿ ಪದ್ಮಾವತಿ ಎಂಬುವವರಿಗೆ ಎಂಟು ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ತಾರಸಿ ಮನೆ ಯು.ಟಿ.ಕೆ. ಕುಠೀರದ ಕೀ ಹಸ್ತಾಂತರ, ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ನೇತೃತ್ವದಲ್ಲಿ ಕಸಮುಕ್ತ ಗ್ರಾಮ ಯೋಜನೆಗೆ ಚಾಲನೆ ಹಾಗೂ ಕಳ್ಳರಕೋಡಿ ಶಾಲೆಯಲ್ಲಿ ನಿರ್ಮಿಸಿದ 3 ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲಾ ಹಾಗೂ ತಾಲೂಕುಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಧ್ಯಾಹ್ನ 1.30ರಿಂದ ಜನಸಂಪರ್ಕ ಸಭೆ ನಡೆಯಲಿದ್ದು, ಮತದಾರ ಪಟ್ಟಿಗೆ ನೋಂದಣಿ, ಗ್ಯಾರಂಟಿ ಯೋಜನೆ, ಪಡಿತರ ಚೀಟಿ ಸಮಸ್ಯೆ ಪರಿಹಾರ, ಆಧಾರ್ ನೋಂದಣಿ, ತಿದ್ದುಪಡಿ ಸಹಿತ ನರಿಂಗಾನ ಗ್ರಾಮದ ಜನಸಾವಾನ್ಯರ ಸಮಸ್ಯೆಗೆ ತಕ್ಷಣ ಪರಿಹಾರ ಸಿಗಲಿದೆ ಎಂದರು.

ಪಂಚಾಯಿತಿ ಸದಸ್ಯರಾದ ಮುರಲೀಧರ ಶೆಟ್ಟಿ ಮೋರ್ಲ, ರಹಿವಾನ್ ಚಂದಹಿತ್ಲ್ ಹಾಗೂ ಸಲೀಂ ಪೋಟ್ಟೋಳಿಕೆ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net