

ಬೆಂಗಳೂರು: ಲಾಕ್ಡೌನ್ ವೇಳೆ ನಾಯಿಗಳಿಗೆ ಆಹಾರ ನೀಡಲು ಹಲವು ಸಂಘಸಂಸ್ಥೆಗಳು ಮುಂದೆ ಬಂದಿವೆ. ಆದರೂ ಶೇ.100 ಆಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ. ಜನರೇ ತಮ್ಮ ಮನೆ ಮುಂದಿನ ಪ್ರಾಣಿಗಳಿಗೆ ಆಹಾರ ನೀಡಬೇಕು. ಜತೆಗೆ ನಾಯಿ ಮತ್ತು ಹಸುಗಳು ಹಸಿವಿನಿಂದ ಬಳಲುತ್ತಿದ್ದರೆ ಸಾರ್ವಜನಿಕರು ಬೆಂಗಳೂರು ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರ ಕಚೇರಿ ಸಂರ್ಪಸಬಹುದು. ದೂ: 080-23418327, 99640 79166.
ಬೀಡಾಡಿ ದನಗಳಿಗೆ ಆಹಾರವಿಲ್ಲ: ಬೆಂಗಳೂರು ನಗರ ಜಿಲ್ಲೆಯಲ್ಲಿ 56 ಸಾವಿರಕ್ಕೂ ಅಧಿಕ ದನಗಳಿರುವ ಕುರಿತು ಪಶುಪಾಲನಾ ಇಲಾಖೆ ವರದಿ ನೀಡಿದೆ. ಅದರಂತೆ, 10 ಸಾವಿರಕ್ಕೂ ಹೆಚ್ಚು ದನಕರುಗಳು ನಗರದ ಮಾರುಕಟ್ಟೆಗಳನ್ನು ಆಹಾರಕ್ಕಾಗಿ ನಂಬಿಕೊಂಡಿದ್ದವು. ಲಾಕ್ಡೌನ್ನಿಂದ ಕೃ.ರಾ. ಮಾರುಕಟ್ಟೆ, ರಸೆಲ್ ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ ಸೇರಿ ಬಹುತೇಕ ಮಾರುಕಟ್ಟೆಗಳು ಬಂದ್ ಆಗಿವೆ. ತರಕಾರಿ, ಸೊಪು್ಪ, ಹಣ್ಣುಗಳ ತ್ಯಾಜ್ಯ ತಿನ್ನುತ್ತಿದ್ದ ಹಸುಗಳು ಆಹಾರವಿಲ್ಲದೆ ಬಳಲುತ್ತಿವೆ. ಈಗ ಬೇಸಿಗೆ ಆರಂಭವಾಗಿದ್ದು ಪಾರಿವಾಳ, ಗಿಳಿ, ಕಾಗೆಗಳು, ಅಳಿಲು, ಕೋತಿಗಳು ಕೂಡ ನೀರು- ಆಹಾರವಿಲ್ಲದೆ ತೊಂದರೆಗೆ ಒಳಗಾಗಿವೆ.
ಲಾಕ್ಡೌನ್ ವೇಳೆ ಹಸಿವಿನಿಂದ ಬೀದಿನಾಯಿಗಳು, ಹಸುಗಳು ಬಳಲುವ ಪರಿಸ್ಥಿತಿ ಗಮನಕ್ಕೆ ಬಂದಿದೆ. ಈ ವೇಳೆ ಎಲ್ಲ ಅಧಿಕಾರಿಗಳು ಮತ್ತು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಸಿವು ಅಥವಾ ಯಾವುದೇ ತೊಂದರೆಯಿಂದ ಬಳಲುತ್ತಿದ್ದ ಪ್ರಾಣಿಗಳ ರಕ್ಷಣೆಗೆ ಪಶು ಇಲಾಖೆ ಸಂರ್ಪಸಿದರೆ ವೈದ್ಯರು ಮನೆಗಳಿಗೆ ಹೋಗಿ ಚಿಕಿತ್ಸೆ ನೀಡುತ್ತಾರೆ. | ನಟೇಶ್ ಪಶು ಸಂಗೋಪನಾ ಇಲಾಖೆ ಆಯುಕ್ತ https://www.vijayavani.net/hubballi-high-alert-corona-case/