ಒಲಿಂಪಿಕ್ ಸಂಸ್ಥೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಪಿ.ಟಿ. ಉಷಾ ಆಯ್ಕೆ

pt usha
Published on

ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆಯ ಮೊದಲ ಮಹಿಳಾ ಅಧ್ಯಕ್ಷರಾಗಿ ಹಿರಿಯ ಅಥ್ಲೀಟ್ ಪಿ.ಟಿ. ಉಷಾ ಆಯ್ಕೆಯಾಗಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಎಲ್. ನಾಗೇಶ್ವರರಾವ್ ಅವರ ಮೇಲ್ವಿಚಾರಣೆಯಲ್ಲಿ ನಡೆದ ಚುನಾವಣೆಯಲ್ಲಿ ಪಿ.ಟಿ. ಉಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ 400 ಮೀ ಹರ್ಡಲ್ಸ್‌ನಲ್ಲಿ 3ನೇ ಸ್ಥಾನ ಗಳಿಸಿದ್ದ ಉಷಾ, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಾದ್ಯಂತ ಮನೆ ಮಾತಾಗಿದ್ದರು. ಭಾರತ ಮತ್ತು ಏಷ್ಯಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಸುಮಾರು 20 ವರ್ಷಗಳ ಕಾಲ ಹಲವು ಸಾಧನೆ ಮಾಡಿದ ಉಷಾ 2000ರಲ್ಲಿ ಕ್ರೀಡಾ ಬದುಕಿನಿಂದ ನಿವೃತ್ತರಾದರು.

ಸ್ವತಃ ಕ್ರೀಡಾಪಟುಗಳು ಒಲಿಂಪಿಕ್ ಸಮಿತಿ ಅಧ್ಯಕ್ಷರಾಗುವುದು ತೀರಾ ಅಪರೂಪ. ಹಲವು ದಶಕಗಳ ಹಿಂದೆ ಮಹಾರಾಜ ಯಾದವೀಂದ್ರ ಸಿಂಗ್ ಅವರು ಅಧ್ಯಕ್ಷರಾಗಿದ್ದರು. ಅವರು ಕೂಡ ಸ್ವತಃ ಕ್ರೀಡಾಪಟುವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net