

ಬೆಂಗಳೂರು: ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ, ತಮ್ಮ 20 ವರ್ಷಗಳ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ಒಡನಾಟವನ್ನು ಕಡಿತಗೊಳಿಸಲು ಮುಂದಾಗಿದ್ದಾರೆ. 13ನೇ ವಯಸ್ಸಿಗೆ ಬಾರ್ಸಿಲೋನಾ ಕ್ಲಬ್ ಸೇರಿದ್ದ ಮೆಸ್ಸಿ ಇದೀಗ ಬೇರೆ ಕ್ಲಬ್ನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಕ್ಲಬ್ಗಳು ಮೆಸ್ಸಿಗೆ ಆಹ್ವಾನ ನೀಡಿವೆ. ಪಾಕಿಸ್ತಾನ ಸೂಪರ್ ಲೀಗ್ಗೆ (ಪಿಎಸ್ಎಲ್) ಸೇರ್ಪಡೆಗೊಳ್ಳುವಂತೆ ದಿಗ್ಗಜ ಆಟಗಾರನಿಗೆ ಆಹ್ವಾನ ನೀಡಲಾಗಿದೆ. ಬಳಿಕ ಎಚ್ಚೆತ್ತುಗೊಂಡ ಪಿಎಸ್ಎಲ್ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.
13ನೇ ವಯಸ್ಸಿನಿಂದಲೂ ಬಾರ್ಸಿಲೋನಾ ತಂಡದೊಂದಿಗೆ ಗುರುತಿಸಿಕೊಂಡಿರುವ ಮೆಸ್ಸಿ ಇದೀಗ ವಿಶ್ವ ಫುಟ್ಬಾಲ್ ಕ್ಷೇತ್ರದ ಕೇಂದ್ರ ಬಿಂದುವಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಅವರು ಬಾರ್ಸಿಲೋನಾ ತಂಡ ತೊರೆಯುತ್ತಾರೆ ಎಂಬುದು. ಕೆಲ ದಿನಗಳಿಂದ ಐಪಿಎಲ್ ತಂಡಗಳಾದ ಕೆಕೆಆರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮಾಷೆಯಾಗಿ ಫುಟ್ಬಾಲ್ ದಿಗ್ಗಜನಿಗೆ ಆಹ್ವಾನ ನೀಡಿದ್ದವು. ಇದರ ಬೆನ್ನಲ್ಲೇ ಪಾಕಿಸ್ತಾನದ ಕ್ರಿಕೆಟ್ ಟೂರ್ನಿ ಪಿಎಸ್ಎಲ್ ಕೂಡ ಮೆಸ್ಸಿಗೆ ಆಹ್ವಾನ ನೀಡಿದೆ. ಕೆಲ ಹೊತ್ತಿನಲ್ಲೇ ಪಿಎಸ್ಎಲ್ ತನ್ನ ಟ್ವೀಟ್ ಮಾಡಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಲೀಗ್ ಟೂರ್ನಿಯಲ್ಲಿ ಮೆಸ್ಸಿ ಒಳಗೊಂಡ ಬಾರ್ಸಿಲೋನಾ ತಂಡ 2-8 ರಿಂದ ಬೇರ್ಯನ್ ಮ್ಯೂನಿಚ್ ತಂಡದ ಎದುರು ಸೋಲನುಭವಿಸಿತು. ಮೆಸ್ಸಿ ತಂಡದ ತೊರೆಯಲು ಇದು ಕೂಡ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕ್ಲಬ್ ತೊರೆಯುತ್ತಿರುವ ಕುರಿತು ಮೆಸ್ಸಿ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ.