ನ್ಯಾಯಾಲಯಕ್ಕೆ ಶರಣಾದ ಪಿಎಸ್​​ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ಪಿನ್​

R D Patil
Published on

ಕಲಬುರಗಿ: ಪೊಲೀಸ್​ ಸಬ್​ ಇನ್​ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ಪಿನ್ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ ಶರಣಾಗಿದ್ದಾನೆ. ಈ ಮೂಲಕ ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದಂತಾಗಿದೆ.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಕಿಂಗ್​ಪಿನ್ ಆಗಿರುವ ಆರ್​.ಡಿ. ಪಾಟೀಲ್ ಇಂದು ಕಲಬುರಗಿ ಜಿಲ್ಲಾ ನ್ಯಾಯಲಯಕ್ಕೆ ಹಾಜರಾಗಿ ಶರಣಾಗಿದ್ದಾನೆ. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಲಬುರಗಿಗೆ ಆಗಮಿಸಲಿದ್ದು, ಅದಕ್ಕೂ ಒಂದು ದಿನ ಮುನ್ನವೇ ಈತ ಶರಣಾಗಿದ್ದಾನೆ.

ಸಿಐಡಿ ಅಧಿಕಾರಿಗಳನ್ನ ತಳ್ಳಿ ಓಡಿ ಹೋಗಿದ್ದ ಆರ್.ಡಿ.ಪಾಟೀಲ್ ತಲೆಮರೆಸಿಕೊಂಡಿದ್ದು, ಬಳಿಕ ಫೇಸ್​ಬುಕ್​ ಮೂಲಕ ಕಾಣಿಸಿಕೊಂಡಿದ್ದ. ಅಫಜಲಪುರದಲ್ಲಿ ಕಟೌಟ್ ಬ್ಯಾನರ್​ಗಳಲ್ಲೂ ಮಿಂಚುತ್ತಿದ್ದ ಆರ್.ಡಿ. ಪಾಟೀಲ್ ಶರಣಾಗತಿ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net