ಪಿಎಸ್​​ಐ ನೇಮಕಾತಿ ಹಗರಣ: ಡಿವೈಎಸ್​​ಪಿ ವೈಜನಾಥ ರೇವೂರ ಜಾಮೀನು ತಿರಸ್ಕರಿಸಿದ ಕೋರ್ಟ್​​

PSi
Published on

ಕಲಬುರಗಿ: ಪಿಎಸ್​ಐ ನೇಮಕಾತಿ ಹಗರಣದ ಕಿಂಗ್​ಪಿನ್​ ಡಿವೈಎಸ್​ಪಿ ವೈಜನಾಥ ರೇವೂರ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದಲ್ಲಿ 29ನೇ ಆರೋಪಿಯಾಗಿರುವ ವೈಜನಾಥ್​​ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿಯ 3ನೇ ಜೆಎಂಎಫ್​​ಸಿ ನ್ಯಾಯಾಲಯ ನ್ಯಾಯಾಧೀಶ ಶ್ರಿನಿವಾಸ ಕೆ. ಆರ್​. ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಕಲಬುರಗಿಯ ಕೆಎಸ್​ಆರ್​ಪಿ 6 6 ನೇ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದ ವೈಜನಾಥ್, ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಸದ್ಯ ಪ್ರಕರಣ ಸಂಬಂಧ ಸಿಐಡಿ ತನಿಖೆ ಕೈಗೊಂಡಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net