ರಕ್ತದಲ್ಲಿ ಪ್ರಧಾನಿಗೆ ಪತ್ರ: ನಮ್ಗೆ ನ್ಯಾಯ ಕೊಡ್ಸಿ... ಇಲ್ಲದಿದ್ರೆ ನಕ್ಸಲರ ಜೊತೆ ಕೈ ಜೋಡಿಸ್ತೀವಿ...

psi
Published on

ಬೆಂಗಳೂರು: ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಆಯ್ಕೆ ಪಟ್ಟಿಯನ್ನೇ ಸರ್ಕಾರ ರದ್ದು ಮಾಡಿದ್ದು, ಮರು ಪರೀಕ್ಷೆಗೆ ಆದೇಶಿಸಿದೆ. ಇದರಿಂದ ನೊಂದ ಪಿಎಸ್ಐ ಅಭ್ಯರ್ಥಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಪಿಎಸ್​ಐ ಪರೀಕ್ಷೆಯಲ್ಲಿ ನ್ಯಾಯವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದವರಿಗೆ ಅನ್ಯಾಯ ಆಗಬಾರದು. ಅನ್ಯಾಯ ಮಾಡಿದವರಿಗೆ ಜೈಲಿಗೆ ಹಾಕಬೇಕು. ಆದರೆ, ಅರ್ಹರಿಗೆ ಮೋಸ ಆಗಬಾರದು. 2021ರಲ್ಲಿ ನಡೆದ ಎಫ್​ಡಿಎ ಪರೀಕ್ಷೆಯಲ್ಲೂ ಅಕ್ರಮವಾಗಿದೆ. ಆ ಬಗ್ಗೆಯೂ ತನಿಖೆ ಮಾಡಿ ನ್ಯಾಯ ಕೊಡಿಸಬೇಕು. ಪ್ರಧಾನಿ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ. ನಮಗೆ ನ್ಯಾಯ ಕೊಡಿಸುತ್ತಾರೆಂಬ ನಂಬಿಕೆ ಇದೆ ಎಂದು ರಕ್ತದಲ್ಲಿ 2 ಪುಟ ಪತ್ರ ಬರೆದಿದ್ದಾರೆ.

ಒಂದು ವೇಳೆ ನಮಗೆ ನ್ಯಾಯ ಕೊಡಿಸದೇ ಹೋದಲ್ಲಿ ನಾವು ಮುಂದೆ ನಕ್ಸಲರ ಜೊತೆ ಕೈಜೋಡಿಸುತ್ತೇವೆ ಎಂದೂ ಪತ್ರದಲ್ಲಿ ಎಚ್ಚರಿಸಿದ್ದಾರೆ. ನಾವು 8 ಜನ ಇದ್ದೀವಿ. ನಮಗೆಲ್ಲ ಅನ್ಯಾಯ ಆಗಿದೆ. ನಾವು ಬಡತನದಲ್ಲಿ ಬೆಳೆದವರು. ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದು ಪಾಸ್​ ಆಗಿದ್ದೇವೆ. ಈ ಅವ್ಯವಸ್ಥೆಯಿಂದ ತುಂಬಾ ನೊಂದಿದ್ದೇವೆ, ಇನ್ನೆಂದೂ ಸರ್ಕಾರಿ ಕೆಲಸಕ್ಕಾಗಿ ಪರೀಕ್ಷೆ ಬರೆಯಲ್ಲ. ಬರೀ ಮೋಸ... ಎಂದು ಅಳಲು ತೋಡಿಕೊಂಡಿದ್ದಾರೆ. ಈ ಪತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net