

ಬೆಂಗಳೂರು: ಒರಿಸ್ಸಾ ಮೂಲದ ಸೆಕ್ಯುರಿಟಿ ಗಾರ್ಡ್ ಪ್ರತಾಪ್ ಹಾಗೂ ಅವರ ಪುತ್ರಿ ಪೂಜಾ ಸ್ವಗ್ರಾಮಕ್ಕೆ ತೆರಳಲು ಮಾರತ್ಹಳ್ಳಿ ಠಾಣೆ ಪಿಎಸ್ಐ ಅನಿತಾ ಅವರು 1600 ರೂ. ಮೊತ್ತದ ಟಿಕೆಟ್ ಖರೀದಿಸಿ ಸಹಾಯ ಮಾಡಿದರು.
ರೈಲು ನಿಲ್ದಾಣಕ್ಕೆ ಆಗಮಿಸಿದ ಅಪ್ಪ ಹಾಗೂ ಮಗಳು ಟಿಕೆಟ್ ಖರೀದಿಗೆ ಹಣ ಇಲ್ಲದೆ ನಿಂತಿದ್ದರು. ಇದನ್ನು ಗಮನಿಸಿದ ಅನಿತಾ ಅವರು ಸಹಾಯ ಮಾಡಿದರು.