

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿ ಸಂದೇಶ ಹಾಕಿ ದ್ವೇಷಭಾವನೆ ಹುಟ್ಟುವಂತೆ ಪೋಸ್ಟ್ ಮಾಡುತ್ತಿದ್ದ 4 ಇನ್ ಸ್ಟಾ ಗ್ರಾಂ ಹಾಗೂ 1ಪೇಸ್ ಬುಕ್ ಪೇಜ್ ಗಳನ್ನು ಕಾನೂನು ಜಾರಿ ಸಂಸ್ಥೆ ರದ್ದುಗೊಳಿಸಿದೆ.
ವಿಎಚ್‌ಪಿ, ಬಜರಂಗದಳ, ಅಶೋಕನಗರ ಮತ್ತು ಸ್ಕಂದ ನಾಡ ಎಂಬ 2 ಇನ್‌ಸ್ಟಾಗ್ರಾಂ ಪೇಜ್‌ಗಳ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ, ಡಿಜೆ ಭರತ್ 2008 ಇನ್‌ಸ್ಟಾಗ್ರಾಂ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ, ಕರಾವಳಿ ಆಫೀಸಿಯಲ್ ಎಂಬ ಇನ್‌ಸ್ಟಾಗ್ರಾಂ ಪೇಜ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ, ಆಶಿಕ್ ಮೈಕಾಲ ೇಸ್‌ಬುಕ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಗಳ ತನಿಖೆಯನ್ನು ಮಂಗಳೂರು ನಗರ ಸೆನ್ ಅಪರಾಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆೆ. ಸದ್ರಿ ಪೇಜ್ ಗಳ ಮಾಹಿತಿ ಹಾಗೂ ರದ್ದು ಮಾಡುವ ಬಗ್ಗೆ ಸಂಬಂಧಪಟ್ಟ ಕಾನೂನು ಜಾರಿ ನಿರ್ದೇಶನಾಲಯಕ್ಕೆ ಪತ್ರ ವ್ಯವಹಾರ ನಡೆಸಲಾಗಿತ್ತು. ಈ ಆಧಾರದಲ್ಲಿ 4 ಇನ್‌ಸ್ಟಾಗ್ರಾಂ ಮತ್ತು ೇಸ್ಬುಕ್ ಪೇಜ್‌ಗಳನ್ನು ರದ್ದುಗೊಳಿಸಲಾಗಿದೆ.
ಇದುವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುತ್ತಿದ್ದ ಒಟ್ಟು 6 ಇನ್ ಸ್ಟಾ ಗ್ರಾಂ ಪೇಜ್‌ಗಳು ಹಾಗೂ 1 ಪೇಸ್ ಬುಕ್ ಪೇಜ್‌ನ್ನು ರದ್ದುಗೊಳಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಉಪ ಪೊಲೀಸ್ ಆಯುಕ್ತರರಾದ ಸಿದ್ದಾರ್ಥ ಗೋಯಲ್ ಮತು ರವಿಶಂಕರ್ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳ ತನಿಖೆ ನಡೆಯುತ್ತಿದೆ.