ಶಿಕ್ಷಣದ ಜತೆಗೆ ಸಂಸ್ಕಾರ ನೀಡಿ

Provide education along with culture.
ತೇರದಾಳ ಸಮೀಪದ ಸಸಾಲಟ್ಟಿ ಗ್ರಾಮದ ಶ್ರೀಶಿವಲಿಂಗೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 32ನೇ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭವನ್ನು ಶೇಗುಣಸಿ ವಿರಕ್ತ ಮಠದ ಡಾ. ಮಹಾಂತ ಪ್ರಭು ಸ್ವಾಮಿಗಳು ಉದ್ಘಾಟಿಸಿದರು. ಕಂಕಣವಾಡಿಯ ಅಭಿನವ ರಾಚೋಟೇಶ್ವರ ದೇವರು, ವಿದ್ಯಾಧರ ಸವದಿ, ಶಿವಬಸವ ದೇವರು, ಶಂಕರ ದೇವರು, ಮಹಾಲಿಂಗ ಶೇಗುಣಸಿ ಮತ್ತಿತರರಿದ್ದರು.
Published on

ತೇರದಾಳ (ಗ್ರಾ): ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡುವುದು ಬಹಳ ಮುಖ್ಯ ಎಂದು ಶೇಗುಣಸಿ ವಿರಕ್ತ ಮಠದ ಡಾ. ಮಹಾಂತಪ್ರಭು ಸ್ವಾಮಿಗಳು ಹೇಳಿದರು.

ಸಸಾಲಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 32ನೇ ಹಾಗೂ ಶ್ರೀ ಜ್ಞಾನಯೋಗಿ ಸ್ವತಂತ್ರ ಪಪೂ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 9ನೇ ವಾರ್ಷಿಕ ಸ್ನೇಹ ಸಮ್ಮೇಳನದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಬೇಕು ಎನ್ನುವ ಉದ್ದೇಶದಿಂದ 32 ವರ್ಷಗಳ ಹಿಂದೆ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು ಶ್ಲಾಘನೀಯ ಎಂದರು.

ಕಂಕಣವಾಡಿಯ ಅಭಿನವ ರಾಚೋಟೇಶ್ವರ ದೇವರು ಹಾಗೂ ವಿದ್ಯಾಧರ ಸವದಿ ಮಾತನಾಡಿದರು. ಬೆಲ್ಲದ ಬಾಗೇವಾಡಿಯ ಭರತೇಶ ಗುರುಕುಲ ರಾಷ್ಟ್ರ ಪ್ರಶಸ್ತಿ ಭೂಷಿತ ಎಸ್.ಬಿ.ಮುನ್ನೊಳ್ಳಿ ಉಪನ್ಯಾಸ ನೀಡಿದರು.

ಸೊರಬದ ಶಿವಬಸವ ದೇವರು, ಬೈಲವಾಡದ ಶಂಕರ ದೇವರು ಸಾನ್ನಿಧ್ಯ ವಹಿಸಿದ್ದರು. ಮಹಾಲಿಂಗ ಶೇಗುಣಸಿ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಮಹೇಶ ಸಂಗಯ್ಯ ಹಿರೇಮಠ, ಸಿಆರ್‌ಪಿ ಬಿ.ಎಂ.ಯಲ್ಲಟ್ಟಿ, ಗ್ರಾಪಂ ಅಧ್ಯಕ್ಷ ವಿದ್ಯಾಶ್ರೀ ಶೇಗುಣಸಿ, ಪರಪ್ಪ ಹನಗಂಡಿ, ಚನಮಲ್ಲ ಮದಲಮಟ್ಟಿ, ರಾಜು ಉಳ್ಳಾಗಡ್ಡಿ, ಈರಪ್ಪ ಮಳ್ಳನ್ನವರ, ಚನ್ನಪ್ಪ ಸಲಬನ್ನವರ, ಭರಮು ಉಳ್ಳಾಗಡ್ಡಿ, ಡಾ.ಸುರೇಶ ಸಲಬನ್ನವರ, ರಾಜಶೇಖರ ಜಲಪೂರ, ಜಕ್ಕಪ್ಪ ಜಲಪೂರ ಮತ್ತಿತರರಿದ್ದರು.

ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಉನ್ನತ ಶಿಕ್ಷಣ ಪಡೆಯುತ್ತಿರುವ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗಗಳಲ್ಲಿ ಸಾಧನೆ ಮಾಡಿದ ಶಾಲೆಯ ಹಿಂದಿನ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.

ವಿದ್ಯಾರ್ಥಿನೀಯರು ಭರತನಾಟ್ಯದೊಂದಿಗೆ ಪ್ರಾರ್ಥಿಸಿ ಸ್ವಾಗತ ಗೀತೆ ಹಾಡಿದರು. ಎಸ್.ಎಮ್.ಸಾಲೂಟಗಿ ಸ್ವಾಗತಿಸಿದರು. ಗೌರಿ ಕನ್ಮಡಿ ಹಾಗೂ ಸಂಗಡಿಗರು ನಿರೂಪಿಸಿದರು. ಸಾಯಂಕಾಲ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net