More

    ‘ಪ್ರೀತಿಸುವುದನ್ನು..ಸತ್ಯ ಹೇಳುವುದನ್ನು, ತಾಳ್ಮೆಯಿಂದ ಇರುವುದನ್ನು ಕಲಿತಿದ್ದೇ ನನ್ನ ಸೋದರನಿಂದ…’

    ನವದೆಹಲಿ: ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇಂದು ರಕ್ಷಾಬಂಧನದ ನಿಮಿತ್ತ ಟ್ವಿಟರ್​ನಲ್ಲಿ ತಮ್ಮ ಸೋದರ ರಾಹುಲ್​ ಗಾಂಧಿಯವರ ಬಗ್ಗೆ ಭಾವನಾತ್ಮಕವಾದ ಪೋಸ್ಟ್ ಹಾಕಿದ್ದಾರೆ. ರಾಹುಲ್​ ಗಾಂಧಿಯಂತಹ ಅಣ್ಣನನ್ನು ಪಡೆದಿದ್ದರ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

    ತಾವು ರಾಹುಲ್​ ಗಾಂಧಿಯವರೊಂದಿಗೆ ಇರುವ ಫೋಟೋವನ್ನು ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ನಾನು ಪ್ರೀತಿ, ಸತ್ಯ, ತಾಳ್ಮೆಯನ್ನು ನನ್ನ ಸಹೋದರನಿಂದ ಕಲಿತಿದ್ದೇನೆ. ಪ್ರತಿ ಸಂತೋಷ ಮತ್ತು ದುಃಖದಲ್ಲಿ ನನ್ನೊಂದಿಗೆ ಇದ್ದಾರೆ ಎಂದು ಹೇಳಿದ್ದಾರೆ. ಹಾಗೇ, ಈ ದೇಶದ ಎಲ್ಲರಿಗೂ ರಕ್ಷಾ ಬಂಧನ ಹಬ್ಬದ ಶುಭಾಶಯಗಳು ಎಂದು ಟ್ವೀಟ್​ ಮಾಡಿದ್ದಾರೆ.

    ಇಂದು ಬೆಳಗ್ಗೆ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿಯವರು ಕೂಡ ತಾವು ಪ್ರಿಯಾಂಕಾ ಗಾಂಧಿಯವರನ್ನು ಅಪ್ಪಿಕೊಂಡಿರುವ ಫೋಟೋ ಹಾಕಿ, ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು ಎಂದಿದ್ದರು. (ಏಜೆನ್ಸೀಸ್​)

    ರಾಜ್ಯದಲ್ಲಿ ಇಂದಿನ ಹೊಸ ಕರೊನಾ ಪ್ರಕರಣಗಳು, ಡಿಸ್​ಚಾರ್ಜ್​ ಆದವರ ಸಂಖ್ಯೆ 4000ಕ್ಕೂ ಅಧಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts