

ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿ ಕೇರಳ ಹೋಟೆಲ್ ಆ್ಯಂಡ್ ರೆಸ್ಟೊರೆಂಟ್ ಅಸೋಸಿಯೇಶನ್ (ಕೆಎಚ್‌ಆರ್‌ಎ) ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಕೆಎಚ್‌ಆರ್‌ಎ ರಾಜ್ಯ ಕೋಶಾಧಿಕಾರಿ ಮುಹಮ್ಮದ್ ಶರೀಫ್ ಧರಣಿ ಉದ್ಘಾಟಿಸಿದರು. ಸಂಘಟನೆ ಕಾಸರಗೋಡು ಜಿಲ್ಲಾಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಸುಗುಣನ್ ಮುಖ್ಯ ಭಾಷಣ ಮಾಡಿದರು.
ವರ್ತಕರ ಮತ್ತು ವಾಣಿಜ್ಯೋದ್ಯಮಿಗಳ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಅಹಮದ್ ಶೆರೀಫ್, ಕೆಎಚ್‌ಆರ್‌ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪುದುವಾಳ್, ಕೆಎಚ್‌ಆರ್‌ಎ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಗಜಾಲಿ, ರಕ್ಷಾಧಿಕಾರಿ ಅಬ್ದುಲ್ಲಾ ತಾಜ್, ರಾಜ್ಯ ಸಮಿತಿ ಸದಸ್ಯರಾದ ಸತ್ಯನಾಥನ್ ಇರಿಯಣ್ಣಿ, ರಫೀಕ್ ಬೈತ್ತಾನ್, ಅಜೇಶ್ ಇದ್ದರು.
ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ರಘುವೀರ ಪೈ ವಂದಿಸಿದರು. ಹೋಟೆಲ್ ಉದ್ಯಮಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.