

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಚೇಳಾರು ಖಂಡಿಗೆ ನಂದಿನಿ ನದಿಗೆ ವಿವಿಧ ಕಂಪನಿ, ಒಳಚರಂಡಿ, ತ್ಯಾಜ್ಯ ಸಂರಕ್ಷಣಾ ಘಟಕ ಸೇರಿದಂತೆ ಹಲವು ಭಾಗಗಳಿಂದ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಸಂಬಂಧಪಟ್ಟವರಿಗೆ ಗಮನಕ್ಕೆ ತಂದರೂ ಸರಿಯಾದ ಸ್ಪಂದನೆ ಸಿಗದ ಕಾರಣ ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಸೇರಿ ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆ ವಿರುದ್ಧ ಮಂಗಳವಾರ ಸುರತ್ಕಲ್ನ ಪಾವಂಜೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ಯಾವುದೇ ಪಕ್ಷ, ಜಾತಿ ನೋಡದೇ ಕೇವಲ ನಮ್ಮ ನಂದಿನಿ ನದಿಯನ್ನು ಕಲುಷಿತದಿಂದ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸೋಣ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ನಂದಿನಿ ನದಿ ಉಳಿಸಿ ಎಂಬ ಹೋರಾಟ ಕೇವಲ ಇಂದು ಮಾತ್ರ ನಡೆಯದೇ ನಮ್ಮ ಸಮಸ್ಯೆ ಪರಿಹಾರ ಅಗುವವರೆಗೆ ಹೋರಾಟ ಮುಂದುವರಿಯಬೇಕು ಎಂದರು.
ಚೇಳಾರು ಗ್ರಾಪಂ ಅಧ್ಯಕ್ಷ ಜಯಾನಂದ, ಡಾ.ಗಣೇಶ್ ಅಮೀನ್ ಸಂಕಮಾರ್, ನಂದಿನಿ ನದಿ ಹೋರಾಟ ಸಮಿತಿ ಪ್ರಮುಖರಾದ ದಿವಾಕರ ಸಾಮಾನಿ, ಚೇಳಾರು ಗ್ರಾ.ಪಂ. ಉಪಾಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಯಶೋದಾ, ಲತಾ, ವಸಂತಿ, ಪ್ರೇಮಾ ಶೆಟ್ಟಿ, ಸುಕುಮಾರಿ, ಚರಣ್ ಕುಮಾರ್, ಪ್ರತಿಮಾ ಶೆಟ್ಟಿ ಮಾಜಿ ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಪಡಪಣಂಬೂರು ಗ್ರಾ.ಪಂ. ಸದಸ್ಯರಾದ ವಿನೋದ್ ಬೆಳ್ಳಾಯಿರು, ಮೂಲ್ಕಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಪ್ರಮುಖರಾದ ಸುಕೇಶ್ ಶೆಟ್ಟಿ, ರಮೇಶ್ ಪೂಜಾರಿ, ಕಿರಣ್ ಶೆಟ್ಟಿ, ವಾಸುದೇವಾ ಶೆಟ್ಟಿ, ದಿವಾಕರ ಶೆಟ್ಟಿ, ವೆಂಕಟೇಶ ಶೆಟ್ಟಿ, ಮನೋಜ್ ಶೆಟ್ಟಿ, ನಿತಿನ್ ಶೆಟ್ಟಿ, ಗಂಗಾಧರ ಪೂಜಾರಿ, ಚರಣ್ ಕುಮಾರ್, ಉದಯಕುಮಾರ್ ಶೆಟ್ಟಿ, ಮಂಗಳೂರು ನಾಗರಿಕ ಸಲಹಾ ಸಮಿತಿ ಉಪಾಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಸುರತ್ಕಲ್ ಬಂಟರ ಸಂಘ ನಿಕಟಪೂರ್ವಧ್ಯಕ್ಷ ಸುಧಾಕರ ಪೂಂಜ, ವೀಣಾ ಶೆಟ್ಟಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ವಜ್ರಾಕ್ಷಿ ಪಿ.ಶೆಟ್ಟಿ, ವಿದ್ವಾನ್ ಚಂದ್ರಶೇಖರ ನಾವಡ, ಹಳೆಯಂಗಡಿ ರಂಗಭಟ್, ಮೊಗವೀರ ಮಿತ್ರಪಟ್ನ ಸುರೇಶ್ ಕರ್ಕೆರ, ಕೆಥೋಲಿಕ್ನ ಪಾವ್ಲ್ ಡಿಸೋಜ, ಸತೀಶ್ ಮುಂಚೂರು, ಜಯರಾಮ ಅಮೀನ್, ಸುಭಾಷಿತ ನಗರ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಶೆಟ್ಟಿ ಮೊದಲಾದವರಿದ್ದರು.
ಮೂಲ್ಕಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಚೇಳಾರು ಪಿಡಿಒ ನಿತ್ಯಾನಂದ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಗ್ರಾಮ ಅಡಳಿತ ಅಧಿಕಾರಿ ಸುಲೋಚನಾ par ಉಪಸ್ಥಿತರಿದ್ದರು.
ನಂದಿನಿ ನದಿ ಕಲುಷಿತಗೊಂಡ ಬಗ್ಗೆ ಕೆಲ ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿನಲ್ಲಿ ಸಂಸದ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆದ ದಿಶಾ ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ವಿಷಯ ಪ್ರಸ್ತಾಪಿಸಿದ್ದರು. ಸಂಸದರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆಯ ಅಯುಕ್ತ ರವಿಚಂದ್ರ ನಾಯಕ್ ಸ್ಥಳಕ್ಕೆ ಭೇಟಿ ನೀಡಿ, ಕಲುಷಿತ ನೀರು ಬರುವುದನ್ನು ಪರಿಶೀಲಿಸಿ ಅದರ ನೀರನ್ನು ಟೆಸ್ಟ್ಗೆ ಕಳುಹಿಸಿ ರಿಪೋರ್ಟ್ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಜಯಾನಂದ, ಚೇಳಾರು ಗ್ರಾಪಂ ಅಧ್ಯಕ್ಷ https://www.vijayavani.net/short-bridge-reception-gate-inaugurated https://www.vijayavani.net/puttige-somanatheshwar-temple-religious-congregation