ಬ್ಯಾಂಕ್ ತಪ್ಪು ನೀತಿ ವಿರುದ್ಧ ಪ್ರತಿಭಟನೆ

New Project (3)
Published on

ಕಾಸರಗೋಡು: ಪ್ರಾಥಮಿಕ ಸಹಕಾರಿ ಸಂಘಗಳನ್ನು ನಾಶಪಡಿಸುತ್ತಿರುವ ಕೇರಳ ಬ್ಯಾಂಕ್‌ನ ತಪ್ಪು ನೀತಿಗಳ ವಿರುದ್ಧ ಕೇರಳ ಕೋ-ಆಪರೇಟಿವ್ ವರ್ಕರ್ಸ್ ಫೆಡರೇಶನ್(ಕೆಸಿಡಬ್ಲುೃಎಫ್) ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡಿನ ಕೇರಳ ಬ್ಯಾಂಕ್ ಸಿಪಿಸಿ ಎದುರು ಪ್ರತಿಭಟನೆ ನಡೆಸಲಾಯಿತು. ಕೆಸಿಡಬ್ಲುೃಎಫ್ ರಾಜ್ಯ ಉಪಾಧ್ಯಕ್ಷ ಕೆ.ರವೀಂದ್ರನ್ ಉದ್ಘಾಟಿಸಿದರು. ಸಹಕಾರಿ ಪ್ರಜಾಪ್ರಭುತ್ವ ವೇದಿಕೆ ಜಿಲ್ಲಾಧ್ಯಕ್ಷ ಕೆ.ನೀಲಕಂಠನ್ ಮಾತನಾಡಿದರು. ಪಿ.ಕೆ.ರಘುನಾಥ್ ಅಧ್ಯಕ್ಷತೆ ವಹಿಸಿದ್ದರು. ವಿ.ಕೆ.ರವೀಂದ್ರನ್, ಸಿಎಂಪಿ ಜಿಲ್ಲಾ ಕಾರ್ಯದರ್ಶಿ ಸಿ.ವಿ.ತಂಬಾನ್, ವಿ.ಎನ್.ಅಶ್ರಫ್, ಟಿ.ವಿ.ಉಮೇಶನ್, ಕೆ.ವಿ.ಸಾವಿತ್ರಿ, ಟಿ.ಕೆ.ವಿನೋದ್, ಕೆ.ವಿ.ಲಕ್ಷ್ಮೀ, ಪಿ.ಕೆ.ಬೇಬಿ, ಪಿ.ಪಿ.ನಿವೇದ್ ಮೊದಲಾದವರು ಉಪಸ್ಥಿತರಿದ್ದರು. ಕೆಸಿಡಬ್ಲುೃಎಫ್ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸಾವಿತ್ರಿ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಪಿ.ವಿ.ಗಿರೀಶ್ ಕುಮಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net