

ಬಂಟ್ವಾಳ: ನೈಸರ್ಗಿಕ ವಿಪತ್ತಿನ ಮೂಲ ಕಾರಣ ಅರಣ್ಯ ನಾಶ. ಜಲ, ನೆಲ, ಪ್ರಾಣಿ ಸಂಕುಲಗಳು ದೇವರ ಆಸ್ತಿ. ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಕಳೆದ 5 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ 7 ಕೋಟಿ ಕಾಡುಹಣ್ಣಿನ ಗಿಡಗಳನ್ನು ನೆಟ್ಟು ರಕ್ಷಣೆ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಬಂಟ್ವಾಳ, ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ, ಉಪ ಅರಣ್ಯ ಇಲಾಖೆ ಬಂಟ್ವಾಳ ತಾಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಂಟ್ವಾಳ ತಾಲೂಕು ಸಹಯೋಗದೊಂದಿಗೆ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಬಬ್ಬರ್ಯ ಬೈಲುವಿನ ಬಬ್ಬರ್ಯ ದೈವಸ್ಥಾನದ ವಠಾರದಲ್ಲಿ ಗಿಡ ನೆಟ್ಟು, ಬಳಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೌರ್ಯ ಘಟಕ ಪ್ರತಿನಿಧಿಗಳಿಗೆ ಹಣ್ಣಿನ ಗಿಡ ವಿತರಿಸಲಾಯಿತು. ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ, ಸಿದ್ದಕಟ್ಟೆ ವಲಯ ಅಧ್ಯಕ್ಷ ಜಗದೀಶ್ ಕೊಯ್ಲ, ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಗ್ರಾಪಂ ಅಧ್ಯಕ್ಷ ಸಂತೋಷ್ ರಾಯಿಬೆಟ್ಟು, ಹರಿಶ್ಚಂದ್ರ ಶೆಟ್ಟಿ ಬಬ್ಬರ್ಯಬೈಲು, ರಾಧಾಕೃಷ್ಣ ಆಚಾರ್ಯ, ಹರ್ಷೇಂದ್ರ ಹೆಗ್ಡೆ, ಶೌರ್ಯ ಸಮಿತಿಯ ಮಾಸ್ಟರ್ ಪ್ರಕಾಶ್, ಕ್ಯಾಪ್ಟನ್ ಕೃಷ್ಣಪ್ಪ ನಾಯ್ಕ, ಪ್ರವೀಣ್ ಪೂಜಾರಿ, ಸದಾನಂದ ನಾವೂರ, ಶಶಿಧರ ಆಚಾರ್ಯ, ಶಾಲಿನಿ, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ. ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ. ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಹರಿಣಾಕ್ಷಿ ವಂದಿಸಿದರು. ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಪಂಚದಲ್ಲಿ ಜನ ಸಂಕುಲ ಉತ್ತಮ ರೀತಿಯಲ್ಲಿ ಬದುಕಬೇಕಾದರೆ ಶೇ.33 ಮರಗಿಡಗಳು ಬೇಕು. ಅರಣ್ಯದಿಂದ ನಮಗೆ ಹಲವಾರು ಉಪಯೋಗಗಳಿದ್ದರೂ ನಾವು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಾ ಬಂದಿದ್ದೇವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆದರೆ ಮಳೆ ಬೀಳುವ ದಿನಗಳು ಕಡಿಮೆ ಆಗುತ್ತಿದೆ. ಇದು ಹೆಚ್ಚಾಗಬೇಕು. ಇದಕ್ಕೆ ಅರಣ್ಯದ ಅವಶ್ಯಕತೆ. ಕೃಷ್ಣ ನಾಯ್ಕ ಉಪವಲಯ ಅರಣ್ಯಾಧಿಕಾರಿ https://www.vijayavani.net/intensified-sea-erosion-in-trikkanad https://www.vijayavani.net/shortage-of-doctors-in-hospital