ಭೂಮಿಯ ರಕ್ಷಣೆ ಸಮಾಜದ ಜವಾಬ್ದಾರಿ

bhoomi dina
ಕುಂದಾಪುರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಭೂಮಿ ದಿನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್. ಉದ್ಘಾಟಿಸಿದರು.
Published on

ಕುಂದಾಪುರ: ಭೂಮಿ ತಾಯಿಗಿಂತ ಮೀಗಿಲಾದದ್ದು ಎಂಬುದು ಹಾಸುಹೊಕ್ಕಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಮಿ ಅನ್ನುವುದು ಕೇವಲ ಕಂದಾಯ, ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಗೆ ಮಾತ್ರ ಹೊಣೆಗಾರಿಕೆ, ಜವಾಬ್ದಾರಿ ಇದೆ ಎಂದು ಭಾವಿಸುತ್ತಿದ್ದಾರೆ. ಸಾಧ್ಯವಾದಷ್ಟು ಭೂಮಿಯನ್ನು ಭೂಮಿಯ ರೂಪದಲ್ಲೇ ಕಾಪಾಡಿಕೊಳ್ಳಬೇಕಾದುದು ಸಮಾಜದ ಹೊಣೆಗಾರಿಕೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ರಾಜು ಎನ್. ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ ಹಾಗೂ ತಾಲೂಕು ಆಡಳಿತ ಕುಂದಾಪುರ ಆಶ್ರಯದಲ್ಲಿ ಮಂಗಳವಾರ ಕುಂದಾಪುರ ತಾಲೂಕು ಕಚೇರಿಯ ಸಭಾಂಗಣದಲ್ಲಿ ಭೂಮಿ ದಿನದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭೂಮಿ ಮೇಲೆ ಆಧುನಿಕತೆ, ಕೈಗಾರಿಕೆಗಳನ್ನು ಪ್ರಾರಂಭಿಸುವ, ವಸತಿ ಪ್ರದೇಶಗಳ ನಿರ್ಮಾಣದ ಹೆಸರಿನಲ್ಲಿ ಭೂಮಿಯ ಮೇಲೆ ಅಕ್ರಮಣ ನಡೆಯುತ್ತಿದೆ. ಭೂಮಿಯನ್ನು ಪರ್ಯಾಯವಾಗಿ ಬಳಸಿಕೊಂಡು ಭೂಮಿ ಸ್ವರೂಪವನ್ನು ಬದಲಾಯಿಸುತ್ತಿರುವುದು ಕಳವಳಕಾರಿ ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್. ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶೆ ಮತ್ತು ನ್ಯಾಯಿಕಾ ದಂಡಾಧಿಕಾರಿ ಮಂಜುಳಾ ಬಿ., ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಎಸ್., ಕುಂದಾಪುರ ವಕೀಲರ ಸಂಘ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಸಹಾಯಕ ಸರ್ಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ಉಪಸ್ಥಿತರಿದ್ದರು. ಡೆಪ್ಯೂಟಿ ತಹಸೀಲ್ದಾರ್ ವಿನಯ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net