ಸಾವಿರ ರೂಪಾಯಿಗೆ ದೇಹ ವ್ಯಾಪಾರ- 12 ಮಂದಿ ಬಂಧನ

prostitution
Published on

ಆಗ್ರಾ: ಉತ್ತರ ಪ್ರದೇಶದ ಆಗ್ರಾದ ಫಾರ್ಮ್‌ಹೌಸ್‌ ಒಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಯುವತಿಯರು ಸೇರಿದಂತೆ 12 ಮಂದಿಯನ್ನು ಬಂಧಿಸಿದ್ದಾರೆ.

ಫಾರ್ಮ್‌ ಹೌಸ್ ಮಾಲೀಕನೂ ಸೇರಿದಂತೆ ಎಲ್ಲರನ್ನೂ ಬಂಧಿಸಲಾಗಿದೆ. ಸಿಕಂದರಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಫಾರ್ಮ್‌ ಹೌಸ್ ಇದೆ. ಯುವತಿಯರೆಲ್ಲರೂ ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಬಂದವರೆಂದು ಪೊಲೀಸರು ಹೇಳಿದ್ದಾರೆ. ಒಂದೆರಡು ಸಾವಿರ ರೂಪಾಯಿಗಾಗಿ ಇವರು ತಮ್ಮ ದೇಹವನ್ನು ವ್ಯಾಪಾರಕ್ಕೆ ಇಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಿಂದ ಯುವತಿಗೆ ಉದ್ಯೋಗದ ಆಮಿಷ ಒಡ್ಡಿಗೆ ಇಲ್ಲಿಗೆ ಕರೆತರಲಾಗುತ್ತಿದೆ. ನಂತರ ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ. ಒಬ್ಬೊಬ್ಬ ಗ್ರಾಹಕರಿಂದ ಗಂಟೆಗಳ ಅಧಾರದ ಮೇಲೆ 1-2 ಸಾವಿರ ರೂಪಾಯಿ ಪಡೆಯಲಾಗುತ್ತದೆ.

ಈ ಹಣದಲ್ಲಿ ಮಾಲೀಕನಿಗೆ ಹೆಚ್ಚಿನ ಪಾಲು ಸೇರುತ್ತದೆ. ಯುವತಿಯರಿಗೆ ಅತ್ಯಲ್ಪ ಹಣ ನೀಡಲಾಗುತ್ತಿದೆ ಎಂದು ಆರೋಪಿಗಳು ಹೇಳಿದ್ದಾರೆ.

ಆರೋಪಿಗಳಿಂದ ಏಳು ಮೊಬೈಲ್ , ಆರು ಬಿಯರ್ ಹಾಗೂ ಇನ್ನೂ ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net