ಗಂಗೊಳ್ಳಿ: ಶ್ರೀ ಗಣೇಶ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಳ್ಳಿಕಟ್ಟೆ-ಹೊಸಾಡು 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ಆರೋಗ್ಯ ತಪಾಸಣೆ ಕಾರ್ಯಕ್ರಮ ಹೊಸಾಡು ಗ್ರಾಪಂ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ಮುರಳೀಧರ್ ಐತಾಳ್ ಅಧ್ಯಕ್ಷತೆ ವಹಿಸಿ, ಸ್ವಚ್ಛ ಭಾರತ ಪರಿಕಲ್ಪನೆಯಡಿ ಸ್ವಚ್ಛತಾ ಹಾಗೂ ಆರೋಗ್ಯ ಮಾಹಿತಿ ಶಿಬಿರ ಆಯೋಜನೆ ಮಾಡುವ ಕುರಿತು ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಸಾಲಿನ ವರ್ಷದಲ್ಲಿ ಸಂಘ 7.19 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾವುದು ಎಂದರು.
ಜ್ಯೋತಿ ಐತಾಳ್ ಹಿಂದಿನ ಸಾಲಿನ ವರದಿ ಮಂಡಿಸಿದರು. ಸಿಇಒ ಅಶ್ವಿನಿ 2023-24ನೇ ಸಾಲಿನ ಆಯವ್ಯಯ ಹಾಗೂ ಆಡಳಿತ ವರದಿ ವಾಚಿಸಿದರು. ಸಂಘ ನಿರ್ದೇಶಕ ಶಾಂತಾರಾಮ ಭಟ್ಟ ನಿವ್ವಳ ಲಾಭದ ಹಂಚಿಕೆ ವರದಿ ಮಂಡಿಸಿದರು. ನಿರ್ದೇಶಕ ಅಶೋಕ ಖಾರ್ವಿ ಅವರು ಮುಂದಿನ ಸಾಲಿನ ಕಾರ್ಯ ಯೋಜನೆಗಳ ಕುರಿತು ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ರವೀಶ ಹೊಳ್ಳ, ನಿರ್ದೇಶಕರು, ಸಲಹೆಗಾರ ವಿಶ್ವಂಭರ ಐತಾಳ್, ಡಿ.ಎಂ.ಕಾರಂತ ಉಪಸ್ಥಿತರಿದ್ದರು. ನಿರ್ದೇಶಕ ಮಂಜುನಾಥ ಸ್ವಾಗತಿಸಿದರು. ಸಂಧ್ಯಾ ಕಾರಂತ ನಿರೂಪಿಸಿದರು. ಲೆಕ್ಕಿಗ ಶ್ರೀಕರ ಐತಾಳ್ ಮತ್ತು ಸುರೇಶ್ ಖಾರ್ವಿ ಸಹಕರಿಸಿದರು.
ಪ್ರತಿಭಾ ಪುರಸ್ಕಾರ
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃಷಿಕರಾದ ಕೃಷ್ಣ ಕಾರಂತ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ ಅಧ್ಯಕ್ಷೆ ಫಿಲೋಮಿನಾ ಫರ್ನಾಂಡಿಸ್, ಉತ್ತಮ ಗ್ರಾಹಕರಾದ ರಾಘವೇಂದ್ರ ಶೆಟ್ಟಿ, ಅಶೋಕ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.