ಎಂಆರ್‌ಪಿಎಲ್ ಸಹಯೋಗದಲ್ಲಿ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಕಾರ್ಯಕ್ರಮ

mng_9 aug MRPL
ಎಂಆರ್‌ಪಿಎಲ್‌ವತಿಯಿಂದ 2 ದಿನಗಳ ವಿಜಿಲೆನ್ಸ್ ಆಡಳಿತದ ಕುರಿತು ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ ಕಾರ್ಯಕ್ರಮ ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ನಡೆಯಿತು. ಕೇಂದ್ರ ಜಾಗೃತ ಆಯೋಗದ ಕಾರ್ಯದರ್ಶಿ ಪಿ. ಡೇನಿಯಲ್ ಹಾಗೂ ಎಂಆರ್‌ಪಿಎಲ್ ಎಂ.ಡಿ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಸಹಿತ ಹಲವರು ಇದ್ದರು.
Published on

ಮಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವತಿಯಿಂದ 2 ದಿನಗಳ ವಿಜಿಲೆನ್ಸ್ ಆಡಳಿತದ ಕುರಿತು ಸಾಮರ್ಥ್ಯ ನಿರ್ಮಾಣ ಮತ್ತು ತರಬೇತಿ ಕಾರ್ಯಕ್ರಮ ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ಶುಕ್ರವಾರ ನಡೆಯಿತು.

ಕೇಂದ್ರ ಜಾಗೃತ ಆಯೋಗದ ಕಾರ್ಯದರ್ಶಿ ಪಿ. ಡೇನಿಯಲ್ ಹಾಗೂ ಎಂಆರ್‌ಪಿಎಲ್ ಎಂ.ಡಿ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, ಎಂಆರ್‌ಪಿಎಲ್ ಸಿವಿಒ ಗಣೇಶ್ ಎಸ್. ಭಟ್ ಅವರನ್ನೊಳಗೊಂಡು ಕಾರ್ಯಕ್ರಮ ಉದ್ಘಾಟಿಸಲಾಯಿತು.

ನಿರ್ದೇಶಕ ರಾಜೀವ್ ವರ್ಮಾ, ಸಿವಿಸಿ ರಿಫೈನರಿ ನಿರ್ದೇಶಕ ವಿ.ನಂದಕುಮಾರ್, ಇಡಿ ಪ್ರಾಜೆಕ್ಟ್ಸ್ ಬಿಎಚ್‌ವಿ ಪ್ರಸಾದ್, ಎಂಆರ್‌ಪಿಎಲ್ ರಿಫೈನರಿ ಇಡಿ ಬಿ.ಸುದರ್ಶನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗ್ರೂಪ್ ಜನರಲ್ ಮ್ಯಾನೇಜರ್‌ಗಳು, ಹಿರಿಯ ಅಧಿಕಾರಿಗಳು ಮತ್ತು ಎಂಆರ್‌ಪಿಎಲ್‌ನ ಸಂಘಟನಾ ತಂಡದೊಂದಿಗೆ ದೇಶಾದ್ಯಂತ ಅನೇಕ ಸಿಪಿಎಸ್‌ಇ ಸಂಸ್ಥೆಗಳ ಮುಖ್ಯ ವಿಜಿಲೆನ್ಸ್ ಅಧಿಕಾರಿಗಳು ಮತ್ತು ವಿಜಿಲೆನ್ಸ್ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಎಂಆರ್‌ಪಿಎಲ್ ಎಂ.ಡಿ ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್ ಸ್ವಾಗತಿಸಿದರು, ಗಣೇಶ್ ಭಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net