ನೀರ್ಕೆರೆ ಶಾಲೆಯಲ್ಲಿ ಕಾರ್ಯಕ್ರಮ

New Project (32)
Published on

ಮೂಡುಬಿದಿರೆ: ನೀರ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಸಂಭ್ರಮದಿಂದ ನಡೆಯಿತು.

ಊರ ಕೇರಿಗಳಲ್ಲಿ ಮಕ್ಕಳ ದಾಖಲಾತಿ ಆಂದೋಲನ ಜಾಥಾ ಆಯೋಜಿಸಿದ್ದು ಮಕ್ಕಳು ಭಾಗವಹಿಸಿದರು. ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ವಿತರಣೆ ಮಾಡಲಾಯಿತು.

ತೆಂಕಮಿಜಾರು ಪಿಡಿಒ ರೋಹಿಣಿ, ಹಿರಿಯರಾದ ಅಜಿತ್‌ರಾಜ್ ಜೈನ್, ಶಶಿಕಾಂತ್ ಶೆಟ್ಟಿಗಾರ್, ಗೋಪಾಲ ಗೌಡ, ಗಿರೀಶ್ ಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರು, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರಶಾಂತ ಜೋಗಿ, ಪಾಲಕರು, ಮುಖ್ಯ ಶಿಕ್ಷಕಿ ಯಮುನಾ, ಶಿಕ್ಷಕರು ಉಪಸ್ಥಿತರಿದ್ದರು. 1ನೇ ತರಗತಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net