ವೀರಾಸ್ವಾಮಿ ನೆನಪು; ‘ಕೆಜಿಎಫ್​’ ಟ್ರೇಲರ್​ ಲಾಂಚ್​ಗೆ ಭಾರತೀಯ ಮಾಧ್ಯಮವನ್ನು ಕರೆಸಿದ್ದು ಕನ್ನಡದ ಈ ಮಾಸ್ಟರ್​ಪೀಸ್​ ಚಿತ್ರದ ಸ್ಫೂರ್ತಿಯಿಂದಾಗಿ..

WhatsApp Image 2020-04-18 at 10.41.33 AM
Published on

ಬೆಂಗಳೂರು: ಕೆಜಿಎಫ್​ ಸಿನಿಮಾದಿಂದ ಸ್ಯಾಂಡಲ್​ವುಡ್​ನ ಚಹರೆಯೇ ಬದಲಾಗಿದೆ. ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ನೋಡುತ್ತಿದೆ. ಟ್ರೇಲರ್ ಲಾಂಚ್​ ಮೂಲಕವೂ ಇಡೀ ಭಾರತೀಯ ಮಾಧ್ಯಮವನ್ನು ಬೆಂಗಳೂರಿಗೆ ಕರೆಸಿತ್ತು. ಎಲ್ಲರ ಸಮ್ಮುಖದಲ್ಲಿ ಐದು ಭಾಷೆಗಳಲ್ಲಿ ಟ್ರೇಲರ್​ ಬಿಡುಗಡೆ ಆಗಿತ್ತು. ಆದರೆ, ಹಾಗೆ ಎಲ್ಲ ಮೀಡಿಯಾದವರನ್ನು ಕರೆದು ಆಹ್ವಾನಿಸಿದ್ದಕ್ಕೆ ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ‘ಶಾಂತಿ ಕ್ರಾಂತಿ’ ಸಿನಿಮಾನೇ ಕಾರಣವಂತೆ! ಈ ವಿಚಾವನ್ನು ಸ್ವತಃ ಚಿತ್ರತಂಡವೇ ಹೇಳಿಕೊಂಡಿದೆ.
ಹೌದು, 1991ರಲ್ಲಿ ಬಿಡುಗಡೆಯಾಗಿದ್ದ ‘ಶಾಂತಿ ಕ್ರಾಂತಿ’ ಸಿನಿಮಾ ಕನ್ನಡದ ಜತೆಗೆ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ತೆರೆಕಂಡಿತ್ತು. ಆಗಿನ ಕಾಲದಲ್ಲಿಯೇ ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಿದ್ದ ಈ ಚಿತ್ರವನ್ನು ವಿ. ರವಿಚಂದ್ರನ್​ ನಿರ್ದೇಶನ ಮಾಡಿದ್ದರು. ಆಗ ದಕ್ಷಿಣ ಭಾರತದ ಮೀಡಿಯಾವನ್ನು ಬೆಂಗಳೂರಿಗೆ ಕರೆಸಲಾಗಿತ್ತು. ಇದೀಗ ಆ ಚಿತ್ರದಿಂದಲೇ ಸ್ಫೂರ್ತಿ ಪಡೆದು ಕೆಜಿಎಫ್​ ಚಿತ್ರದ ಟ್ರೇಲರ್​ ಲಾಂಚ್​ಗೆ ಇಡೀ ಇಂಡಿಯನ್​ ಮೀಡಿಯಾ ಕರೆಸಿದ್ದರಂತೆ. ಹೀಗೆ ಈ ಸ್ಫೂರ್ತಿಯ ಕಥೆಯನ್ನು ಹೇಳಿಕೊಂಡಿದ್ದು, ಕೆಜಿಎಫ್​ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ. ಇದೆಲ್ಲವನ್ನು ಹೇಳಿಕೊಳ್ಳುವುದಕ್ಕೆ ಕಾರಣ, ಏ. 17ರಂದು ರವಿಚಂದ್ರನ್​ ಅವರ ತಂದೆ ಎನ್​ ವೀರಾಸ್ವಾಮಿ ಜನ್ಮದಿನ. ಅವರ ಫೋಟೋವನ್ನು ಶೇರ್​ ಮಾಡಿಕೊಂಡು, ಒಂದಷ್ಟು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net