ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಹಿನ್ನೆಲೆಯಲ್ಲಿ ರಾಜಾಜಿನಗರದಲ್ಲಿ ಪಥಸಂಚಲನ

rss
Published on

ಬೆಂಗಳೂರು: 1925ನೇ ವಿಜಯದಶಮಿಯಂದು ನಾಗಪುರದಲ್ಲಿ ಡಾ.ಕೇಶವ ಬಲಿರಾಮ್ ಹೆಡಿಗೆವಾರ್ ನೇತೃತ್ವದಲ್ಲಿ ಕೇವಲ 17 ಜನ ಸಮಾನ ಮನಸ್ಕರು ದೇಶದ ಹಿತಾಸಕ್ತಿಯನ್ನಿರಿಸಿಕೊಂಡು ಆರಂಭಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದ ಶತಮಾನೋತ್ಸವದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಜಾಜಿನಗರದ ಸರದಾರ ವಸತಿಯ ರಾಯಣ್ಣ ಶಾಖೆ ವತಿಯಿಂದ ಆರಂಭವಾದ ಪಥಸಂಚಲನ ವಿವಿಧ ಬಡಾವಣೆಯ ಮೂಲಕ ಸಂಚರಿಸಿ ಗಾಯಿತ್ರಿ ನಗರದ ಉದ್ಯಾನವನಕ್ಕೆ ಆಗಮಿಸಿ ಸಂಪನ್ನಗೊಂಡಿತು.

ಪಥ ಸಂಚಲನದಲ್ಲಿ ಸಂಘದ ಎಲ್ಲಾ ಸ್ವಯಂ ಸೇವಕರು ಗಣವೇಶ ಧರಿಸಿ ಪಾಲ್ಗೊಂಡಿದ್ದರು. ಪಥ ಸಂಚಲನಕ್ಕೆ ದಾರಿಯುದಕ್ಕೂ ಸಾರ್ವಜನಿಕರು ಪುಷ್ಪ ವೃಷ್ಟಿಯೊಂದಿಗೆ ಸ್ವಾಗತಿಸಿ, ಘೋಷಣೆ ಕೂಗಿದ್ದು ವಿಶೇಷವಾಗಿತ್ತು.

ಶತಾಬ್ದಿ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಂಘವು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ಸಮಾಜದೊಂದಿಗೆ ಯಾವುದೇ ಭೇದ ಭಾವವಿಲ್ಲದೆ ಶ್ರಮಿಸಿದ ಹಿರಿಯರನ್ನು ಸ್ಮರಿಸಲಾಯಿತು. ಮುಂದಿನ ಪೀಳಿಗೆಗೆ ಸದೃಢ ಭಾರತ, ಸ್ವಾವಲಂಬಿ ಭಾರತ, ಸುಸಂಸ್ಕೃತ ಭಾರತ, ಸಮೃದ್ಧ ಭಾರತ, ನಿರ್ಭರ ಭಾರತ, ಸಂಪೂರ್ಣ ಹಿಂದುತ್ವ ಸಂಘಟನೆ ಹಾಗೂ ಭಾರತ ಮಾತೆ ಸೇವೆಗೆ ವ್ಯಕ್ತಿ ನಿರ್ಮಾಣ ಎಂಬ ಗುರಿಯನ್ನಿರಿಸಿಕೊಂಡು ಸಂಘ ಕಾರ್ಯಚಟುವಟಿಕೆ ರೂಪಿಸಿದೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕರುಗಳಾದ ಎಸ್.ಹರೀಶ್, ಸುಹಾಸ್ ಪಾಟೀಲ್, ಬದ್ರಿ ಕಾಖಂಡಕಿ, ಸುನಿಲ್ ನಾಡಿಗೇರ್, ಉದಯ ಕುಲಕರ್ಣಿ, ಶಶಿಕಾಂತ್ ಕುಲಕರ್ಣಿ, ಮದನ್ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net