ಇಂದಿನಿಂದ ಪ್ರೊ ಕಬಡ್ಡಿ 10ನೇ ಆವೃತ್ತಿ: ಕ್ಯಾರವಾನ್ ಮಾದರಿಯಲ್ಲಿ ಟೂರ್ನಿ ಆಯೋಜನೆ, ಗುಜರಾತ್ ಜೈಂಟ್ಸ್-ತೆಲುಗು ಟೈಟಾನ್ಸ್ ನಡುವೆ ಉದ್ಘಾಟನಾ ಪಂದ್ಯ

New-Project-5
Published on

ಅಹಮದಾಬಾದ್: ಕಳೆದ ಒಂದೂವರೆ ತಿಂಗಳಿನಿಂದ ಏಕದಿನ ವಿಶ್ವಕಪ್ ಹಬ್ಬದಲ್ಲಿ ತಲ್ಲೀನರಾಗಿದ್ದ ಕ್ರೀಡಾಭಿಮಾನಿಗಳಿಗೆ ಶನಿವಾರದಿಂದ ದೇಸಿ ಕ್ರೀಡೆಯ ಸೊಬಗನ್ನು ಸವಿಯುವ ಅವಕಾಶ ಒಲಿದಿದೆ. ವರ್ಷದಿಂದ ವರ್ಷಕ್ಕೆ ರೋಚಕ ಅನುಭವ ನೀಡುತ್ತಿರುವ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಗೆ ಅಹಮದಾಬಾದ್‌ನಲ್ಲಿ ಚಾಲನೆ ಸಿಗಲಿದೆ. ಮುಂದಿನ ಮೂರು ತಿಂಗಳ ಕಾಲ ನಡೆಯಲಿರುವ ಈ ಲೀಗ್ ಭರ್ಜರಿ ಮನರಂಜನೆ ನೀಡುವ ಜತೆಗೆ ಸಾಕಷ್ಟು ಕುತೂಹಲ ಮೂಡಿಸಲಿದೆ.

ಮತ್ತೆ ಕ್ಯಾರವಾನ್ ಮಾದರಿ: ಕರೋನಾ ಬಳಿಕ ಒಂದೇ ಸ್ಥಳದಲ್ಲಿ ಆಯೋಜಿಲಾಗಿದ್ದ ಟೂರ್ನಿ, ಕಳೆದ ಬಾರಿ ಮೂರು ತಾಣಗಳಲ್ಲಿ ಮಾತ್ರ ಆಯೋಜಿಸಲಾಗಿತ್ತು. ಆದರೆ ಈ ಬಾರಿ ಟೂರ್ನಿ ಹಿಂದಿನ ಕ್ಯಾರವಾನ್ ಮಾದರಿಗೆ ಮರಳಿದ್ದು, 12 ್ರಾಂಚೈಸಿಗಳೂ ತಮ್ಮ ತವರಿನ ಮೈದಾನದಲ್ಲಿ ಸೆಡ್ಡು ಹೊಡೆಯಲಿವೆ. 12 ತಂಡಗಳು ಡಬಲ್ ರೌಂಡ್ ರಾಬಿನ್ ಮಾದರಿ ಲೀಗ್‌ನಲ್ಲಿ ತಲಾ 22 ಪಂದ್ಯಗಳನ್ನು ಆಡಲಿವೆ. ಅಂಕಪಟ್ಟಿಯ ಅಗ್ರ 6 ತಂಡಗಳು ಪ್ಲೇಆ್ಗೆ ಅರ್ಹತೆ ಪಡೆಯಲಿವೆ.

ಬಹುಮಾನ ಮೊತ್ತ:  ಒಟ್ಟು : 8 ಕೋಟಿ ರೂ. . ಚಾಂಪಿಯನ್: 3 ಕೋಟಿ ರೂ., ರನ್ನರ್ ಅಪ್: 1.5 ಕೋಟಿ ರೂ.

ಒಟ್ಟು ಪಂದ್ಯಗಳು-137

ತಂಡ: 12

ಇಂದಿನ ಪಂದ್ಯಗಳು

ಗುಜರಾತ್ ಜೈಂಟ್ಸ್ -ತೆಲುಗು ಟೈಟಾನ್ಸ್

ಯು ಮುಂಬಾ-ಯುಪಿ ಯೋಧಾಸ್

ಆರಂಭ: ರಾತ್ರಿ 8.00

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net